ಪ್ರಧಾನ ಸುದ್ದಿ

ಕರ್ನಾಟಕದ ಮೂವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Guruprasad Narayana

ಬೆಂಗಳೂರು: ಕರ್ನಾಟಕದ ಮೂವರು ಲೇಖಕರಿಗೆ ೨೦೧೬ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ವಿವಿಧ ಪ್ರಶಸ್ತಿಗಳು ಲಭಿಸಿವೆ. ಹಿರಿಯ ಲೇಖಕ ಸುಮತೀಂದ್ರ ನಾಡಿಗ್, ಯುವ ಲೇಖಕರಾದ ವಿಕ್ರಮ್ ಹತ್ವಾರ್ ಮತ್ತು ರಘು ಕಾರ್ನಾಡ್ ಈ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಹಿರಿಯ ಕವಿ ಲೇಖಕ ಸುಮತೀಂದ್ರ ನಾಡಿಗ್ ಅವರ ಸಮಗ್ರ ಮಕ್ಕಳ ಸಾಹಿತ್ಯಕ್ಕಾಗಿ ಬಾಲ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.

ವಿಕ್ರಮ್ ಹತ್ವಾರ್ ತಮ್ಮ 'ಜೀರೋ ಮತ್ತು ಒಂದು" ಕಥಾ ಸಂಕಲನಕ್ಕಾಗಿ 'ಯುವ ಸಾಹಿತ್ಯ ಪುರಸ್ಕಾರ' ಪಡೆದಿದ್ದಾರೆ. ೩೫ ವರ್ಷದ ಒಳಗಿನ ಬರಹಗಾರರಿಗೆ ಯುವ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯ ಜೊತೆಗೆ ೫೦ ಸಾವಿರ ನಗದು ಬಹುಮಾನ ಕೂಡ ನೀಡಲಾಗುತ್ತದೆ.

ಹಾಗೂ ಹಿರಿಯ ಲೇಖಕ ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರ ಪುಸ್ತಕ 'ಫಾರ್ದೆಸ್ಟ್ ಫೀಲ್ಡ್' ಪುಸ್ತಕಕ್ಕಾಗಿ ಇಂಗ್ಲಿಶ್ ವಿಭಾಗದಲ್ಲಿ ಜೀವನ ಚರಿತ್ರೆಗಳ ವಿಭಾಗಕ್ಕೆ ಪುರಸ್ಕಾರಿಸಲಾಗಿದೆ.

SCROLL FOR NEXT