ಪ್ರಧಾನ ಸುದ್ದಿ

ಬೆಲೆ ನಿಯಂತ್ರಣಕ್ಕೆ ಕೇಂದ್ರದ ಮಾಸ್ಟರ್ ಪ್ಲಾನ್; ವಿದೇಶದಲ್ಲಿ ಕೃಷಿ ಭೂಮಿ ಲೀಸ್!

Srinivasamurthy VN

ನವದೆಹಲಿ: ಸಾಕಷ್ಟು ಕ್ರಮಗಳ ಹೊರತಾಗಿಯೂ ಬೆಲೆ ನಿಯಂತ್ರಣಕ್ಕೆ ಬಾರದ ಕಾರಣ ಕೇಂದ್ರ ಸರ್ಕಾರ ವಿದೇಶದಲ್ಲಿ ಕೃಷಿ ಭೂಮಿ ಲೀಸ್ ಗೆ ಪಡೆಯುವ ಮೂಲಕ ಬೇಳೆಕಾಳುಗಳನ್ನು ಬೆಳೆಯಲು ಮಾಸ್ಟರ್ ಪ್ಲಾನ್ ರೂಪಿಸಿದೆ.

ಪ್ರಸಕ್ತ ಸಾಲಿನ ಮುಂಗಾರು ಉತ್ತಮವಾಗಿರಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ಹೊರತಾಗಿಯೂ ದೇಶದ ಜನತೆ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಧ್ಯಮವರ್ಗದ ಜನತೆ ಕಂಗಾಲಾಗಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಬೇಳೆ-ಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದೆಯಾದರೂ, ಸಾಕಷ್ಟು ಪ್ರಮಾಣದಲ್ಲಿ ಬೇಳೆ-ಕಾಳುಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಈ ಬೆಲೆ ಏರಿಕೆ ಸಮಸ್ಯೆ ನಿಯಂತ್ರಣತ್ತೆ ಮಾಸ್ಟರ್ ಪ್ಲಾನ್ ರೂಪಿಸಿರುವ ಕೇಂದ್ರ ಸರ್ಕಾರ ವಿದೇಶಗಳಿಂದ ಬೇಳೆ-ಕಾಳುಗಳನ್ನು ಆಮದು ಮಾಡಿಕೊಳ್ಳುವದಷ್ಟೇ ಅಲ್ಲದೇ, ಬೇಳೆ-ಕಾಳುಗಳ ಬೆಳೆಯಲು ಉತ್ತಮ ವಾತಾವರಣವಿರುವ ಕೃಷಿ ಭೂಮಿಯನ್ನು ಲೀಸ್ ಗೆ ಪಡೆಯಲು ಮುಂದಾಗಿದೆ. ವಿದೇಶದಲ್ಲಿ ಕೃಷಿ ಭೂಮಿ ಪಡೆದು ಅಲ್ಲಿ ಬೇಳೆ-ಕಾಳುಗಳನ್ನು ಬೆಳೆದು ಭಾರತಕ್ಕೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೇಂದ್ರ ಆಹಾರ ಇಲಾಖೆಯ ಮೂಲಗಳು ತಿಳಿಸಿರುವಂತೆ ಆಫ್ರಿಕಾದ ಕೆಲ ದೇಶಗಳಲ್ಲಿ ಬೇಳೆ-ಕಾಳುಗಳನ್ನು ಬೆಳೆಯಲು ಉತ್ತಮ ವಾತಾವರಣನವಿದ್ದು, ಇದೇ ಕಾರಣಕ್ಕಾಗಿ ಭಾರತ ಆ ದೇಶದ  ಕೃಷಿ ಭೂಮಿಯನ್ನು ಭೋಗ್ಯಕ್ಕೆ ಪಡೆಯಲು ಚಿಂತನೆ ನಡೆಸಿದೆ. ಮೊಜಾ೦ಬಿಕ್ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಲೀಸ್‍ಗೆ ಪಡೆದು, ಅಲ್ಲಿ ಧಾನ್ಯಗಳ  ಕೃಷಿ ಮಾಡಿ ಭಾರತಕ್ಕೆ ಆಮದು ಮಾಡಿಕೊಳ್ಳುವ ಚಿ೦ತನೆ ಸರ್ಕಾರದ್ದಾಗಿದೆ. ಆದರೆ ಕೃಷಿ, ಸಾಗಾಣಿಕೆ ವೆಚ್ಚ ಸೇರಿ ಎಷ್ಟು ಖಚು೯ ತಗಲುತ್ತದೆ? ಯಾವಾಗ ಈ ಪ್ರಕ್ರಿಯೆ ಆರ೦ಭಿಸಲಾಗುತ್ತದೆ?  ಎ೦ಬ ಬಗ್ಗೆ ಕೇ೦ದ್ರ ಸಕಾ೯ರದಿಂದ ನಿಖರ ಮಾಹಿತಿ ಬಂದಿಲ್ಲ.

ಒಂದು ವೇಳೆ ಸರ್ಕಾರದ ಈ ಯೋಜನೆ ಯಶಸ್ವಿಯಾದರೆ, ಮುಂದಿನ ಹಲವು ವರ್ಷಗಳ ಕಾಲ ಭಾರತಕ್ಕೆ ಬೇಳೆ-ಕಾಳುಗಳ ಕೊರತೆಯೇ ಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT