ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತದ ಒತ್ತಡಕ್ಕೆ ಮಣಿದ ಚೀನಾ; ಎನ್ ಎಸ್ ಜಿ ಕುರಿತು ಧನಾತ್ಮಕ ಪ್ರತಿಕ್ರಿಯೆ!

ಇಷ್ಟು ದಿನ ಭಾರತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ ಇದೀಗ ಒತ್ತಡಕ್ಕೆ ಮಣಿದಿದೆ. ಅಲ್ಲದೆ ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ(ಎನ್​ಎಸ್​ಜಿ) ವಿಚಾರದಲ್ಲಿ ತಾನು ರಚನಾತ್ಮಕ ಪಾತ್ರವಹಿಸುವುದಾಗಿ ಹೇಳಿದೆ...

ಬೀಜಿಂಗ್: ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆಯಾಗುವ ಭಾರತದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಇಷ್ಟು ದಿನ ಭಾರತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ  ಇದೀಗ ಒತ್ತಡಕ್ಕೆ ಮಣಿದಿದೆ. ಅಲ್ಲದೆ  ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ(ಎನ್​ಎಸ್​ಜಿ) ವಿಚಾರದಲ್ಲಿ ತಾನು ರಚನಾತ್ಮಕ ಪಾತ್ರವಹಿಸುವುದಾಗಿ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು, ಭಾರತ ಮತ್ತು ಪಾಕಿಸ್ತಾನಕ್ಕೆ ಒಕ್ಕೂಟದ ಸದಸ್ಯತ್ವ ನೀಡುವ ಸಂಬಂಧ ಎನ್​ಎಸ್​ಜಿ  ಸದಸ್ಯರು ಮೂರು ಸುತ್ತಿನ ಅನಧಿಕೃತ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ನೂತನ ಸದಸ್ಯರ ಸೇರ್ಪಡೆ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರವಹಿಸಲಿದ್ದು, ಈ ಸಂಬಂಧ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸುವುದಾಗಿ  ತಿಳಿಸಿದೆ. ಎನ್ ಎಸ್ ಜಿ ಸದಸ್ಯತ್ವಕ್ಕೆ ಭಾರತ ನಡೆಸುತ್ತಿರುವ ಯತ್ನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಚೀನಾವು ಧನಾತ್ಮಕ ಪಾತ್ರ ವಹಿಸಲಿದೆ ಎಂದು ಚೀನಾದ  ವಿದೇಶಾಂಗ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.

ಜೈಶ೦ಕರ್‍ ರೆ ಹೊಣೆ
ಏತನ್ಮಧ್ಯೆ, ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಯತ್ನಗಳಿಗೆ ಬೆಂಬಲ ಕ್ರೋಢೀಕರಿಸುವ ಸಲುವಾಗಿ ನಾಳೆ ನಡೆಯಲಿರುವ ಎನ್​ಎಸ್​ಜಿ ರಾಷ್ಟ್ರಗಳ ಸಭೆಗೆ ಒಂದು ದಿನ  ಮುಂಚಿತವಾಗಿಯೇ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಬುಧವಾರ ಸಿಯೋಲ್​ಗೆ ತೆರಳಿದರು. ಎನ್‍ಎಸ್‍ಜಿ ಸದಸ್ಯತ್ವ ಪಡೆಯಲು 48 ಸದಸ್ಯರಾಷ್ಟ್ರಗಳ ಬೆ೦ಬಲ  ಪಡೆಯುವ ನಿಟ್ಟಿನಲ್ಲಿ ವಿದೇಶಾ೦ಗ ಕಾರ್ಯದಶಿ೯ ಜೈಶ೦ಕರ್ ಸಿಯೋಲ್‍ಗೆ ಪ್ರವಾಸ ತೆರಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಜೂನ್ 23, 24ರ೦ದು ಮುಖ್ಯಸಭೆ ನಡೆಯಲಿದೆ.

ಎನ್‍ಎಸ್‍ಜಿ ಸದಸ್ಯ ರಾಷ್ಟ್ರಗಳ ಸಭೆ ನಡೆಸಿ ಅ೦ತಿಮ ಹ೦ತದ ಒತ್ತಡ ಹೇರಲು ಭಾರತ ನಿಧ೯ರಿಸಿದ್ದು, ಚೀನಾ ಹೊರತು ಪಡಿಸಿ ಉಳಿದ ರಾಷ್ಟ್ರಗಳ ಬೆ೦ಬಲ ಗಳಿಸುವ ನಿಟ್ಟಿನಲ್ಲಿ  ರಾಜತಾ೦ತ್ರಿಕ ಮಾಗ೯ ಅನುಸರಿಸಲು ಭಾರತ ಮು೦ದಾಗಿದೆ. ವಿದೇಶಾ೦ಗ ಇಲಾಖೆಯ ಅ೦ತಾರಾಷ್ಟ್ರೀಯ ಭದ್ರತಾ ವಿಭಾಗದ ಮುಖ್ಯಸ್ಥ ಅಮನ್‍ದೀಪ್‍ಸಿ೦ಗ್ ಗಿಲ್ ಈಗಾಗಲೇ  ಸಿಯೋಲ್‍ನಲ್ಲಿದ್ದು, ಹಲವು ರಾಷ್ಟ್ರಗಳ ಪ್ರತಿನಿಧಿಗಳೊ೦ದಿಗೆ ಮಾತುಕತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!