ಶ್ರೀನಗರ: ಸುತ್ತುವರೆದ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಪ್ರಾದೇಶಿಕ ಕಮಾಂಡರ್ ಮಂಗಳವಾರ ಹತ್ಯೆಯಾಗಿದ್ದಾನೆ.
"ಸಮೀರ್ ವಾನಿ ಎಂದು ಗುರುತಿಸಲಾಗಿರುವ ಹಿರಿಯ ಹಿಜ್ಬುಲ್ ಮುಜಾಹಿದೀನ್ ಪ್ರಾದೇಶಿಕ ಕಮಾಂಡರ್ ನಗ್ರಿ ಗ್ರಾಮದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾನೆ" ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
"ಉಗ್ರಗಾಮಿಗಳು ಮನೆಯೊಂದರಲ್ಲಿ ಅಡಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಮನೆಯೊಂದನ್ನು ಸುತ್ತುವರಿದಿದ್ದರು.
"ಗುಂಡಿನ ಕಾಳಗ ಇನ್ನು ಜಾರಿಯಲ್ಲಿದ್ದು, ಉಗ್ರಗಾಮಿಗಳು ತಪ್ಪಿಸಿಕೊಳ್ಳದಂತೆ ಇಲ್ಲ ಹೊರದಾರಿಗಳನ್ನು ಮುಚ್ಚಲಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ.