ಪ್ರಧಾನ ಸುದ್ದಿ

ಮುಂಬೈ ಡ್ಯಾನ್ಸ್ ಬಾರ್ ಗಳ ಪರವಾನಗಿಗೆ ಇದ್ದ ಅಡೆತಡೆಗಳನ್ನು ನಿವಾರಿಸಿದ ಸುಪ್ರೀಂ ಕೋರ್ಟ್

Guruprasad Narayana

ನವದೆಹಲಿ: ಮುಂಬೈ ಹೋಟೆಲ್ ಮತ್ತು ರೆಸ್ಟರೆಂಟ್ ಗಳಲ್ಲಿ ಡ್ಯಾನ್ಸ್ ಬಾರ್ ನೊಂದಣಿಗಾಗಿ ಇದ್ದ ಕೆಲವು ಅಡೆತಡೆಗಳನ್ನು ಬುಧವಾರ ಸುಪ್ರೀಂ ಕೋರ್ಟ್ ನಿವಾರಿಸಿದ್ದು, ಊಟ ಸೇವಿಸುವ ಪ್ರದೇಶ ಮತ್ತು ನೃತ್ಯ ಮಾಡುವ ಪ್ರದೇಶಗಳಲ್ಲಿ ಸಿ ಸಿ ಟಿ ವಿ ಅಳವಡಿಸುವುದಕ್ಕೆ ರಿಯಾಯಿತಿ ನೀಡಿದೆ.

ಹೋಟೆಲ್ ಮತ್ತು ರೆಸ್ಟರೆಂಟ್ ಗಳಿಗೆ ಮೂರು ದಿನಗಳ ಅವಕಾಶ ನೀಡಿದ್ದು, ಈ ಹೊಸ ನಿಯಮಗಳನ್ನು ಪಾಲಿಸಲು ತಿಳಿಸಿರುವ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶಿವ ಕೀರ್ತಿ ಸಿಂಗ್ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠ, ತದನಂತರ ೧೦ ದಿನಗಳ ಒಳಗೆ ಅಧಿಕಾರಿಗಳು ಪರವಾನಗಿ ನೀಡಲಿದ್ದಾರೆ ಎಂದು ತಿಳಿಸಿದೆ.

"ನೀವು ಈ ಹೊಸ ನಿಯಮಗಳನ್ನು ಅನುಸರಿಸಿ, ಆಗ ಅಧಿಕಾರಿಗಳು ನಿಮ್ಮ ಪರವಾನಿಗಿಗೆ ತಡೆ ಹಾಕುವುದಿಲ್ಲ" ಎಂದು ಕೋರ್ಟ್ ತಿಳಿಸಿದೆ.

ಹೊಟೇಲ್ ಮತ್ತು ರೆಸ್ಟರೆಂಟ್ ಗಳ ಸಂಘ, ಡ್ಯಾನ್ಸ್ ಬಾರ್ ಪರವಾನಗಿ ನೀಡಲು ಮಹಾರಾಷ್ಟ್ರ ಸರ್ಕಾರ ಕೆಲವು ಅತಾರ್ಕಿಕ ನಿಯಮಗಳನ್ನು ಹೇರಿದೆ ಎಂದು ಫೆಬ್ರವರಿ ೨೪ ರಂದು ಸುಪ್ರೀಮ್ ಕೋರ್ಟ್ ಮೆಟ್ಟಿಲು ಏರಿತ್ತು. ನಿಯಮಗಳನ್ನು ಮರುಪರಿಶೀಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಫೆಬ್ರವರಿ ೨೪ ರಂದು ಕೋರ್ಟ್ ತಿಳಿಸಿತ್ತು.

SCROLL FOR NEXT