ಪ್ರಧಾನ ಸುದ್ದಿ

ದೇಶದ್ರೋಹದ ಆರೋಪ: ಎಸ್ ಎ ಆರ್ ಗಿಲಾನಿಗೆ ಜಾಮೀನು

Guruprasad Narayana

ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್ ಎ ಆರ್ ಗಿಲಾನಿ ಅವರಿಗೆ ಕೋರ್ಟ್ ಶನಿವಾರ ಜಾಮೀನು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೀಪಕ್ ಗಾರ್ಗ್, ಗಿಲಾನಿ ಅವರಿಗೆ ಜಾಮೀನು ನೀಡಿದ್ದಾರೆ.

ಗೀಲಾನಿ ವಿರುದ್ಧದ ಆರೋಪಗಳು ಘೋರವಾದವು ಎಂದು ದೆಹಲಿ ಪೊಲೀಸರು ಕೋರ್ಟ್ ಗೆ ಶುಕ್ರವಾರ ತಿಳಿಸಿದ್ದರು.

ಸಂಸತ್ತಿನ ಮೇಲಿನ ದಾಳಿಯ ತಪ್ಪಿತಸ್ಥ ಅಪ್ಜಲ್ ಗುರುವನ್ನು ಗಲ್ಲಿಗೇರಿಸಿದ್ದ ದಿನದ ನೆನಪಿಗಾಗಿ ದೆಹಲಿ ಪ್ರೆಸ್ ಕ್ಲಬ್ ನಲ್ಲಿ ಫೆಬ್ರವರಿ ೯ ರಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ದೇಶದ್ರೋಹದ ಆರೋಪದ ಮೇಲೆ ದೆಹಲಿ ಪೊಲೀಸರು ಅಪ್ಜಲ್ ಗುರು ಅವರನ್ನು ಬಂಧಿಸಿದ್ದರು. ಅಪ್ಜಲ್ ಗುರು ಬುಧವಾರ ಹೊಸ ಜಾಮೀನು ಅರ್ಜಿ ಸಲ್ಲಿಸಿದ್ದರು.

ತಾವು ಸಲ್ಲಿಸಿದ್ದ ಹೊಸ ಅರ್ಜಿಯಲ್ಲಿ, ಫೆಬ್ರವರಿ ೧೬ ರಿಂದ ತಮ್ಮನ್ನು ನ್ಯಾಯಂಗ ಬಂಧನದಲ್ಲಿ ಇರಿಸಿರುವುದರಿಂದ ಯಾವುದೇ ಉಪಯೋಗವಾಗಿಲ್ಲ. ತಮ್ಮ ವಿರುದ್ಧ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಅವರು ತಿಳಿಸಿದ್ದರು.

ಈ ಹಿಂದೆ ಫೆಬ್ರವರಿ ೧೯ ರಂದು ಮೆಜೆಸ್ಟ್ರೇಟ್, ಗಿಲಾನಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಗೀಲಾನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದರು ಎಂದು ದೆಹಲಿ ಪೊಲೀಸರು ವಾದಿಸಿದ್ದರು.

SCROLL FOR NEXT