ಪ್ರಧಾನ ಸುದ್ದಿ

ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ; ಕೇರಳಿಗರಿಂದ ಮೋದಿ ವಿರುದ್ಧ ಟ್ವೀಟ್ ವಾರ್

Rashmi Kasaragodu
ತಿರುವನಂತಪುರಂ: ಭಾನುವಾರ (ಮೇ.8)ರಂದು ಕೇರಳದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದರ ವಿರುದ್ಧ ಕೇರಳಿಗರು ಟೀಕಾಪ್ರಹಾರ ನಡೆಸುತ್ತಿದ್ದಾರೆ. 
ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ ಕೇರಳದಲ್ಲಿರುವ ಪರಿಶಿಷ್ಟ ಪಂಗಡ ಜನಾಂಗದಲ್ಲಿ ಶಿಶು ಮರಣ ಪ್ರಮಾಣವು ಸೊಮಾಲಿಯಾಕ್ಕಿಂತಲೂ ಅಧಿಕವಾಗಿದೆ ಎಂದು ಹೇಳಿದ್ದರು. 
ಮೇ 16ರಂದು ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೇರಳಿಗರನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ ವಿರುದ್ಧ ಕೇರಳದ ರಾಜಕಾರಣಿಗಳೂ, ನೆಟಿಜನ್‌ಗಳೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊಮಾಲಿಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಶಿಶು ಮರಣ ಸಂಖ್ಯೆ ಹೆಚ್ಚಿದೆ. ಆದಾಗ್ಯೂ, ಭಾರತದಲ್ಲಿ ಅತೀ ಕಡಿಮೆ ಶಿಶು ಮರಣ ದರವಿರುವ ರಾಜ್ಯವಾಗಿದೆ ಕೇರಳ. ಹೀಗಿರುವಾಗ ಪ್ರಧಾನಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದು ಸರಿಯಲ್ಲ ಎಂದು ಕೇರಳದ ಜನರು ಮೋದಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. 
ಮೋದಿ ಮಾತುಗಳ ಬಗ್ಗೆ ಪ್ರತಿಕ್ರಯಿಸಿ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಪತ್ರ ಬರೆದಿದ್ದು, ಮೋದಿ ಕ್ಷಮೆಯಾಚಿಸಬೇಕು ಎಂದಿದ್ದಾರೆ. 
ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದು ಸರಿಯಲ್ಲ, ಇಲ್ಲಿನ ಯಾಥಾರ್ಥ್ಯಕ್ಕೂ ಸೊಮಾಲಿಯಾಗೂ ಯಾವುದೇ ಸಂಬಂಧವಿಲ್ಲ, ಪ್ರಧಾನಿಯವರು ಈ ರೀತಿ ಮಾತುಗಳನ್ನಾಡಿದ್ದು ಖೇದಕರ ಎಂದು ಚಾಂಡಿ ಪ್ರತಿಕ್ರಿಯಿಸಿದ್ದಾರೆ.
ಅದೇ ವೇಳೆ ಮೋದಿಯ ಈ ಮಾತುಗಳನ್ನು ಪ್ರತಿಭಟಿಸಿದ ನೆಟಿಜನ್ ಗಳು ಬುಧವಾರ ಸಾಮಾಜಿಕ ತಾಣಗಳಲ್ಲಿ  #PoMoneModi ಹ್ಯಾಶ್‌ಟ್ಯಾಗ್ ಮೂಲಕ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇರಳ ಮತ್ತು ಗುಜರಾತ್‌ನ್ನು ಹೋಲಿಸಿ ಕೇರಳವೇ ಗುಜರಾತ್‌ಗಿಂತ ಮೇಲು ಎಂದು ತೋರಿಸುವ ಪೋಸ್ಟ್ ಗಳೂ ವೈರಲ್ ಆಗುತ್ತಿವೆ.
ಫೇಸ್‌ಬುಕ್, ಟ್ವಿಟರ್‌ನಲ್ಲಿಯೂ  ಎಂಬ #PoMoneModi ಹ್ಯಾಶ್ ಟ್ಯಾಗ್ ನಲ್ಲಿ ಮೋದಿ ವಿರುದ್ಧದ ಟ್ರೋಲ್ ಗಳು, ಪೋಸ್ಟ್ ಗಳು ಹರಿದಾಡುತ್ತಿದ್ದು, ಸೋಷ್ಯಲ್ ಮೀಡಿಯಾದಲ್ಲಿ  ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
 #PoMoneModi ಹ್ಯಾಶ್ ಟ್ಯಾಗ್ ಯಾಕೆ? : ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್ ನಟಿಸಿದ ನರಸಿಂಹಂ ಎಂಬ ಸಿನಿಮಾದಲ್ಲಿ  ಪೋ ಮೋನೇ ದಿನೇಶಾ ಎಂಬ ಡೈಲಾಗ್ ಜನಪ್ರಿಯವಾಗಿತ್ತು. ಅದೇ ಧಾಟಿಯಲ್ಲೀಗ ಪೋ  ಮೋನೇ ಮೋದಿ ಎಂದು ಮಲಯಾಳಂನಲ್ಲಿ ಹೇಳಲಾಗಿದೆ. ಮಲಯಾಳಂ ಭಾಷೆಯಲ್ಲಿ  ಪೋ ಮೋನೇ ಅಂದರೆ  'ಹೋಗು ಮಗನೇ' ಎಂದರ್ಥ.
ಸಾಮಾಜಿಕ ತಾಣಗಳಲ್ಲಿ ಮೋದಿ ವಿರುದ್ಧದ ಟ್ವೀಟ್  ವಾರ್ ಹೀಗಿದೆ:
SCROLL FOR NEXT