ನವದೆಹಲಿ: ಬಿಜೆಪಿ ಫೈರ್‌ಬ್ರಾಂಡ್ ರಾಜ್ಯ ಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಈಗ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಮೇಲೆ ಗುರಿಯಿಟ್ಟಿದ್ದಾರೆ. ಗುರುವಾರ ಸಂಸತ್‌ನಲ್ಲಿ ಮಾತನಾಡಿದ ಸ್ವಾಮಿ, ನನ್ನ ಪ್ರಕಾರ ಆರ್‌ಬಿಐ ಗವರ್ನರ್ ನಮ್ಮ ದೇಶಕ್ಕೆ ಅನುಕೂಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ.
ಅವರು ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಡ್ಡಿದರವನ್ನು ಏರಿಕೆ ಮಾಡಿದರು. ಆದರೆ ಇದರಿಂದಾಗಿ ದೇಶ ಸಂಕಷ್ಟಕ್ಕೀಡಾಯಿತು. ಇದರಿಂದಾಗಿ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಯಿತು. ಅವರನ್ನು ಆದಷ್ಟು ಬೇಗ ಆ ಪದವಿಯಿಂದ ಕೆಳಗಿಳಿಸಿ ಶಿಕಾಗೋಗೆ ಕಳುಹಿಸುವುದು ಒಳ್ಳೆಯದು ಎಂದು ಹೇಳಿರುವ ಸ್ವಾಮಿ, ರಾಜನ್ ಅವರು ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಅರ್ಹ ವ್ಯಕ್ತಿ ಅಲ್ಲ ಎಂದು ಟೀಕಿಸಿದ್ದಾರೆ.