ಉಮನ್ ಚಾಂಡಿ 
ಪ್ರಧಾನ ಸುದ್ದಿ

ಈ ದಯನೀಯ ಸೋಲನ್ನು ನಿರೀಕ್ಷಿಸಿರಲಿಲ್ಲ: ಚಾಂಡಿ

ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲುಂಡು ಅಧಿಕಾರದಿಂದ ಹೊರನಡೆಯಲಿರುವ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಮುಖ್ಯಮಂತ್ರಿ ಉಮನ್ ಚಾಂಡಿ, ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ

ಕೊಟ್ಟಾಯಂ: ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲುಂಡು ಅಧಿಕಾರದಿಂದ ಹೊರನಡೆಯಲಿರುವ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಮುಖ್ಯಮಂತ್ರಿ ಉಮನ್ ಚಾಂಡಿ, ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದು ಗುರುವಾರ ಹೇಳಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಜನರ ಆಯ್ಕೆಯೇ ಅಂತಿಮ. ನಿರೀಕ್ಷಿಸಿಲ್ಲದಿದ್ದರೂ ಈ ಸೋಲನ್ನು ಒಪ್ಪಿಕೊಳ್ಳುತ್ತೇವೆ" ಎಂದು ಪುತುಪಲ್ಲಿನ ಅವರ ಮನೆಯಲ್ಲಿ ಸೋಲಿನಿಂದ ಅಚ್ಚರಿಗೊಂಡಿದ್ದ ಚಾಂಡಿ ಹೇಳಿದ್ದಾರೆ.

"ನಾವು ಅಧಿಕಾರಕ್ಕೆ ಬರುವ ಭರವಸೆಯಲಿದ್ದೆವು ಆದರೆ ಹೀಗಾಗಿದೆ. ಈಗ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ

ವಿಸರ್ಜನೆಯಾಗಲಿರುವ ವಿಧಾನಸಭೆಯಲ್ಲಿ ೩೯ ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಗ ಕೇವಲ ೨೩ ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸುವ ಸಾಧ್ಯತೆಯಿದ್ದು, ಯುಡಿಎಫ್ ಒಟ್ಟಾರೆ ೧೪೦ ಕ್ಷೇತ್ರಗಲ್ಲಿ ೪೬ ಕಡೆ ಮುಂಚೂಣಿಯಲ್ಲಿದೆ.

ಸಿ ಪಿ ಐ- ಎಂ ನೇತೃತ್ವದ ಎಲ್ ಡಿ ಎಫ್ ೯೨ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಲಕ್ಷಣಗಳಿದ್ದು, ಬಿಜೆಪಿ ಒಂದು ಸ್ಥಾನ ಪಡೆದು ಕೇರಳದಲ್ಲಿ ಖಾತೆ ತೆರೆದಿದೆ.

"ಯುಡಿಎಫ್ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ಹೊರುತ್ತೇನೆ" ಎಂದಿದ್ದಾರೆ ಚಾಂಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT