ಪ್ರಧಾನ ಸುದ್ದಿ

ಮುಂಬಯಿ ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ: 60 ಮಹಿಳೆಯರು ವಶಕ್ಕೆ

Shilpa D

ಮುಂಬೈ: ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಡಾನ್ಸ್ ಬಾರ್​ಗಳ ಮೇಲೆ ಸಾಮಾಜಿಕ ಸೇವಾದಳ  ಪೊಲೀಸರು ದಾಳಿ ನಡೆಸಿ, 60 ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 60 ಮಹಿಳೆಯರು ಹಾಗೂ 75 ಪುರುಷರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಬಾರ್ ಮಾಲೀಕರು ಹಾಗೂ ಗ್ರಾಹಕರು ಸೇರಿದ್ದಾರೆ.

ಮುಂಬಯಿನ ಗ್ರಾಂಟ್ ರಸ್ತೆಯಲ್ಲಿರುವ ತೇಜಾ ಬಾರ್, ಘಾಟ್​ಕೋಪರ್​ನಲ್ಲಿನ ಮೆಹ್ಪಿಲ್ ಬಾರ್, ಅಂದೇರಿ ನಗರದಲ್ಲಿರುವ ಫಿಂಕ್ ಪ್ಲಾಜಾ ಬಾರ್ ಹಾಗೂ ಮುಂಬೈನ ಕೇಂದ್ರ ಸ್ಥಾನದಲ್ಲಿರುವ ಸಮುಂದರ್ ಬಾರ್​ಗಳು ಮಹಾರಾಷ್ಟ್ರದ ಬಾರ್ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದವು.

ಮಹಿಳಾ ಸಂರಕ್ಷಣ ಅಧಿನಿಯಮ 2016ರ ಅನ್ವಯ ಬಾರ್ ಪಾಲಿಸ ಬೇಕಾದ ಹಲವು ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಬಾರ್​ಗಳನ್ನು ಪುನರಾರಂಭಿಸಲು ನಿಗದಿತ ಅವಧಿಯೊಳಗೆ ಪರವಾನಿಗೆ ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ದಶಕಗಳ ಹಿಂದೆ ರಾಜ್ಯಸರ್ಕಾರ ಡಾನ್ಸ್ ಬಾರ್​ಗಳಿಗೆ ಸೂಚಿಸಿದ್ದ ನಿಷೇಧವನ್ನು ವಜಾ ಮಾಡುವಂತೆ ಕಳೆದ ಮಾರ್ಚ್ 15ರಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಇನ್ನೂ ಡ್ಯಾನ್ಸ್ ಬಾರ್ ಮಾಲೀಕನಿಗೆ ಐದು ವರ್ಷ ಜೈಲು ಮತ್ತು 25 ಸಾವಿರ ರು. ದಂಡ ವಿಧಿಸಲಾಗುತ್ತದೆ.

SCROLL FOR NEXT