ಪ್ರಧಾನ ಸುದ್ದಿ

ಎಐಡಿಎಂಕೆ ಮತ್ತು ಡಿಎಂಕೆ ಶೇಕಡಾವಾರು ಮತ ವ್ಯತ್ಯಾಸ ೧.೧%: ಕರುಣಾನಿಧಿ

Guruprasad Narayana

ಚೆನ್ನೈ: ತಮಿಳು ನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ನಡುವೆ ಶೇಕಡಾವಾರು ಮತ ವ್ಯತ್ಯಾಸ ೧.೧% ಎಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಶುಕ್ರವಾರ ಹೇಳಿದ್ದಾರೆ.

ಕರುಣಾನಿಧಿ ಅವರು ನೀಡಿರುವ ಹೇಳಿಕೆಯಲ್ಲಿ, ಡಿಎಂಕೆ ಮುಂದಾಳತ್ವದ ಮೈತ್ರಿ ಪಕ್ಷ ೧,೭೧,೭೫,೩೭೪ ಮತಗಳನ್ನು ಅಥವಾ ಎಲ್ಲ ಮತಗಳ ೩೯.೭% ಮತಗಳನ್ನು ಗಳಿಸಿದ್ದಾರೆ ಎಐಡಿಎಂಕೆ ೧,೭೬,೧೭,೦೬೦ ಮತಗಳನ್ನು (೪೦.೮%) ಗಳಿಸಿದೆ ಎಂದು ಹೇಳಿದ್ದಾರೆ.

ಆದರೆ ಮೇ ೧೬ರ ವಿಧಾನಸಭಾ ಚುನಾವಣೆಯನ್ನು ಎಐಡಿಎಂಕೆ ಗೆದ್ದಿದೆ. ೨೩೪ ಸಂಖ್ಯೆಯ ವಿಧಾನಸಭೆಯಲ್ಲಿ ಡಿಎಂಕೆ ೮೯ ಕ್ಷೇತ್ರಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.

ಡಿಎಂಕೆ ನೇತೃತ್ವದ ಮೈತ್ರಿಗೆ ಮತ ಹಾಕಿದ್ದಕ್ಕೆ ರಾಜ್ಯದ ಜನತೆಗೆ ಧನ್ಯವಾದ ತಿಳಿಸಿರುವ ಕರುಣಾನಿಧಿ ಅವರನ್ನು ಗೆಲ್ಲಿಸಿದ ತಿರುವರೂರ್ ಕ್ಷೇತ್ರದ ಜನಕ್ಕೂ ಧನ್ಯವಾದ ಹೇಳಿದ್ದಾರೆ.

SCROLL FOR NEXT