ಪ್ರಧಾನ ಸುದ್ದಿ

ರೇಪ್ ಆಪಾದಿತ ಆರ್ ಜೆ ಡಿ ಶಾಸಕನನ್ನು ಮತ್ತೆ ಜೈಲಿಗಟ್ಟಿದ ಸುಪ್ರೀಂ ಕೋರ್ಟ್

Guruprasad Narayana
ನವದೆಹಲಿ: ಶಾಲಾ ಬಾಲಕಿಯನ್ನು ರೇಪ್ ಮಾಡಿರುವ ಆರೋಪ ಎದುರಿಸುತ್ತಿರುವ ಬಿಹಾರದ ಆರ್ ಜೆ ಡಿ ಶಾಸಕನನ್ನು ಎರಡು ವಾರದೊಳಗೆ ಶರಣಾಗತನಾಗಲು ಸುಪ್ರೀಂ ಕೋರ್ಟ್ ತಿಳಿಸಿದೆ. 
ನಾವಡಾದ ರಾಷ್ಟ್ರೀಯ ಜನತಾ ದಳದ ಶಾಸಕ ರಾಜಬಲ್ಲವ್ ಯಾದವ್ ಕಳೆದ ವರ್ಷ ಫೆಬ್ರವರಿಯಲ್ಲಿ ಅಪ್ರಾಪ್ತೆಯನ್ನು ರೇಪ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 
ಸಂತ್ರಸ್ತೆ ಹೇಳಿಕೆ ದಾಖಲು ಮಾಡುವಂತೆ ಅನುವಾಗಲು, ತಮ್ಮ ಕಕ್ಷಿದಾರ ಎರಡು ವಾರದೊಳಗೆ ಜೈಲಿಗೆ ಹಿಂದಿರುಗಬೇಕು ಎಂದು ಹಿರಿಯ ವಕೀಲ ದುಷ್ಯಂತ್ ದಾವೆ ಅವರಿಗೆ ನ್ಯಾಯಾಧೀಶ ಎ ಕೆ ಸಿಕ್ರಿ ಮತ್ತು ನ್ಯಾಯಮೂರ್ತಿ ಎನ್ ವಿ ರಮಣ ಒಳಗೊಂಡ ಪೀಠ ಸೂಚಿಸಿದೆ. 
ಸಂತ್ರಸ್ತೆ ಮತ್ತು ಇತರ ಸಾಕ್ಷಿಗಳನ್ನು ಪ್ರಭಾವಿಸಲು ಆರೋಪಿ ಯತ್ನಿಸಬಾರದು ಎಂದು ಕೂಡ ತಿಳಿಸಿರುವ ಕೋರ್ಟ್ ಮುಂದಿನ ವಿಚಾರಣೆಯನ್ನು ನವೆಂಬರ್ 23 ಕ್ಕೆ ಮುಂದೂಡಿದೆ. 
ಸೆಪ್ಟೆಂಬರ್ ನಲ್ಲಿ ಪಾಟ್ನಾ ಹೈಕೋರ್ಟ್ ರಾಜಬಲ್ಲವ್ ಯಾದವ್ ಅವರಿಗೆ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 
ಈ ಪ್ರಕರಣದ ನಂತರ ಪಕ್ಷದಿಂದ ರಾಜಬಲ್ಲವ್ ಅವರನ್ನು ಉಚ್ಛಾಟಿಸಲಾಗಿತ್ತು. ಪ್ರಾದೇಶಿಕ ನ್ಯಾಯಾಲಯ ಇವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದರಿಂದ ಅವರು ಫೆಬ್ರವರಿಯಲ್ಲಿ ತಲೆಮರೆಸಿಕೊಂಡಿದ್ದರು ಆದರೆ ನಂತರ ಮಾರ್ಚ್ ನಲ್ಲಿ ಕೋರ್ಟ್ ಗೆ ಶರಣಾಗಿದ್ದರು. 
ಸೆಪ್ಟೆಂಬರ್ 30 ರಂದು ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಏಪ್ರಿಲ್ ನಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ರಾಜಬಲ್ಲವ್ ಸೇರಿಸಿ ಐವರು ಆರೋಪಿಗಳಲಿದ್ದಾರೆ. 
SCROLL FOR NEXT