ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಚಳಿಗಾಲಕ್ಕೆ ಸೂರಿಲ್ಲದವರ ಸಹಾಯಕ್ಕೆ 18.81 ಕೋಟಿ ಅನುದಾನ ನೀಡಿದ ಉತ್ತರಪ್ರದೇಶ

ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಲಖನೌ: ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ. 
ಹೊದಿಕೆಗಳನ್ನು ವಿತರಿಸುವ ಮೂಲಕ ಹಾಗು ಚಳಿ ಕಾಯಿಸಿಕೊಳ್ಳಲು ಬಯಲುರಿಯನ್ನು ಹಾಕಲು ನೆರವಾಗಿ ಬಡ, ಸೂರಿಲ್ಲದ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 
ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಈಗಾಗಲೇ ಇದಕ್ಕಾಗಿ ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ಹೇಳಿದ್ದಾರೆ. 
ಕಳೆದ ಚಳಿಗಾಲಗಳಲ್ಲಿ ಎದುರಿಸಿರುವ ತೊದರೆಗಳನ್ನು ಗಮನದಲ್ಲಿರಿಸಿ, ಬಡಜನಕ್ಕಾಗಿ ಹೊದಿಕೆಗಳನ್ನು ಖರೀದಿಸಲು ಪ್ರತಿ ತಾಲ್ಲೂಕಿಗೆ ಐದು ಲಕ್ಷ ರೂ ಅನುದಾನ ನೀಡಲಾಗಿದೆ. 342 ತಾಲ್ಲೂಕುಗಳಲ್ಲಿ ಹೊದಿಕೆಗಳ ವಿತರಣೆಗಾಗಿಯೇ 17.1 ಕೋಟಿ ರೂ ಮೀಸಲಿಡಲಾಗಿದೆ. 
ಹಾಗೆಯೇ ಸಾರ್ವಜನಿಕ ಪ್ರದೇಶಗಳಲ್ಲಿ ಬಯಲುರಿಗಳನ್ನು ಹೊತ್ತಿಸಲು ನೆರವಾಗಲು ಪ್ರತಿ ತಾಲ್ಲೂಕಿಗೆ 50 ಸಾವಿರ ರೂ ನೀಡಲಾಗುತ್ತಿದ್ದು ಇದಕ್ಕಾಗಿ 1.71 ಕೋಟಿ ರು ಅನುದಾನ ಬಿಡುಗಡೆ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್