ಪ್ರಧಾನ ಸುದ್ದಿ

ಕಿಡ್ನಿ ಸಮಸ್ಯೆಗೆ ಎಐಐಎಂಎಸ್ ನಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ

Guruprasad Narayana
ನವದೆಹಲಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಎಐಐಎಂಎಸ್) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ವೈದ್ಯರೊಬ್ಬರು ಮಂಗಳವಾರ ಹೇಳಿದ್ದಾರೆ. 
ಎಂಡೋಕ್ರಾನಿಕಲ್ ಪರೀಕ್ಷೆಗಳಿಗಾಗಿ ನವೆಂಬರ್ ೭ ರಂದು ಸುಷ್ಮಾ ಸ್ವರಾಜ್ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು. 
"ಸುಷ್ಮಾ ಅವರಿಗೆ ಡಯಾಬೆಟಿಸ್ ತೊಂದರೆ ಇದೆ ಆದುದರಿಂದ ಅವರ ಕಿಡ್ನಿಗೆ ತೊಂದರೆಯಾಗಿದೆ. ಅವರು ಈಗ ಡಯಾಲಿಸಿಸ್ ಗೆ ಒಳಗಾಗಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ" ಎಂದು ಎಐಐಎಂಎಸ್ ವೈದ್ಯರು ಹೇಳಿದ್ದಾರೆ. 
ವೈದ್ಯರು ತಿಳಿಸಿರುವ ಪ್ರಕಾರ ಸುಷ್ಮಾ ಸ್ವರಾಜ್ ಅವರ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು ತೀವ್ರ ಡಯಾಬೆಟಿಕ್ ತೊಂದರೆಯಿಂದ ನರಳುತ್ತಿದ್ದಾರೆ. 
ಈ ಹಿಂದೆ ಶ್ವಾಸಕೋಶದ ತೊಂದರೆಯಿಂದ ೬೪ ವರ್ಷದ ಸುಷ್ಮಾ ಸ್ವರಾಜ್ ಅವರನ್ನು ಏಪ್ರಿಲ್ ನಲ್ಲಿ ಹಲವು ವಾರಗಳ ಕಾಲ ಎಐಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
SCROLL FOR NEXT