ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಉತ್ತರಪ್ರದೇಶ ಬ್ಯಾಂಕ್, ಎಟಿಎಂಗಳ ಎದುರು ಘರ್ಷಣೆ-ಹಿಂಸಾಚಾರ; ಪೋಲೀಸರ ಲಾಠಿ ಚಾರ್ಜ್

ನಗದು ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಎದುರು ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿದ್ದು, ಉತ್ತರಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಜನರು ಧೃತಿಗೆಟ್ಟು ಹಿಂಸೆ ಮತ್ತು ಆಸ್ತಿಪಾಸ್ತಿಗಳ

ಲಖನೌ: ನಗದು ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಎದುರು ಸರತಿ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿದ್ದು, ಉತ್ತರಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಜನರು ಧೃತಿಗೆಟ್ಟು ಹಿಂಸೆ ಮತ್ತು ಆಸ್ತಿಪಾಸ್ತಿಗಳ ಧ್ವಂಸಕ್ಕೆ ಮುಂದಾಗಿರುವುದರಿಂದ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. 
ಕಳೆದ ೨೪ ಘಂಟೆಗಳಲ್ಲಿ, ಬ್ಯಾಂಕ್ ಅಧಿಕಾರಿಗಳ ಮತ್ತು ಪೊಲೀಸರ ವಿರುದ್ಧದ ೧೨ ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಘಟನೆಗಳು ವರದಿಯಾಗಿವೆ. 
ಬಹರೈಚ್ ನ ಅಲ್ಲಹಾಬಾದ್ ಬ್ಯಾಂಕ್ ಘಟಕದ ಮುಂದೆ ಆಕ್ರೋಶಗೊಂಡಿದ್ದ ಗುಂಪನ್ನು ಲಾಠಿಚಾರ್ಜ್ ಮಾಡುವ ಮೂಲಕ ಚದುರಿಸಲಾಗಿದ್ದು ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
ಹಾಗೆಯೇ ಆಗ್ರಾ ಸಮೀಪದ ಹಲವು ಸಣ್ಣ ನಗರಗಳಲ್ಲಿ ಬ್ಯಾಂಕ್ ಮತ್ತು ಎಟಿಎಂಗಳಿಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 
ಹಾಪುರ್ ನ ದೇನ ಬ್ಯಾಂಕ್ ನಲ್ಲಿ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಲ್ಲದೆ ಮಹಿಳೆಯರನ್ನು ತಳ್ಳಾಡಿದ ಘಟನೆ ನಡೆದಿದೆ. ಪ್ರಧಾನ ಮಂತ್ರಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಎಸ್ ಬಿ ಐ ಬ್ಯಾಂಕ್ ಎದುರು ಖಾತಾದಾರರು ಗಲಭೆ ಎಬ್ಬಿಸಿದ್ದರಿಂದ ಬ್ಯಾಂಕ್ ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ. 
ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ ಈ ಘಟನೆಗಳು ಹೆಚ್ಚಿವೆ ಎಂದು ತಿಳಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಹೆಚ್ಚಿನ ಪೊಲೀಸರನ್ನು ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ನಿಯೋಜಿಸುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!