ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ನೋಟು ವಿನಿಮಯ ನೀತಿ ಬದಲಾವಣೆ; ಮದುವೆ ಕಾರ್ಯಕ್ಕೆ 2.5 ಲಕ್ಷ ವಿತ್ ಡ್ರಾ ಮಾಡಬಹುದು

ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿಯನ್ನು ಬದಲಾವಣೆ ಮಾಡಿದ್ದು, ಇಷ್ಟು ದಿನ ಇದ್ದ 4, 500 ಸಾವಿರ ಹಣ ಬದಲಾವಣೆ ಮಿತಿಯನ್ನು 2000 ರು.ಗೆ ಕಡಿತಗೊಳಿಸಿದೆ.

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿಯನ್ನು ಬದಲಾವಣೆ ಮಾಡಿದ್ದು, ಇಷ್ಟು ದಿನ ಇದ್ದ 4, 500 ಸಾವಿರ ಹಣ ಬದಲಾವಣೆ ಮಿತಿಯನ್ನು 2000 ರು.ಗೆ ಕಡಿತಗೊಳಿಸಿದೆ.

ನೂತನ ಮಿನಿಮಯ ನೀತಿಯ ಅನ್ವಯ ವ್ಯಕ್ತಿಯೋರ್ವ ದಿನವೊಂದಕ್ಕೆ ಗರಿಷ್ಠ 2500 ರು. ಮಾತ್ರ ಹಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಅದರಂತೆ ಈ ಹಿಂದೆ 4 ಸಾವಿರ ರು. ಹಳೆಯ ನೋಟು ನೀಡಿ ಹೊಸ ನೋಟು  ಬದಲಾವಣೆ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಆ ಮಿತಿಯನ್ನು 2 ಸಾವಿರ ರು.ಗೆ ಇಳಿಕೆ ಮಾಡಲಾಗಿದೆ. ಇನ್ನು ವಿತ್ ಡ್ರಾ ಮಿತಿಯಲ್ಲೂ ಸಾಕಷ್ಚು ಬದಲಾವಣೆ ಮಾಡಲಾಗಿದ್ದು, ಮದುವೆ ಮತ್ತು ಇತರೆ ಸಮಾರಂಭಗಳ ನಿಮಿತ್ತ ಹಣ ವಿತ್ ಡ್ರಾ ಮಾಡುವ ಕುಟುಂಬ ಗರಿಷ್ಠ 2.5 ಲಕ್ಷ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ. ಆದರೆ ಈ ರೀತಿ ವಿತ್ ಡ್ರಾ ಮಾಡುವ ಖಾತೆ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಹೊಂದುವುದು ಅನಿವಾರ್ಯ ಎಂದು ವಿತ್ತ ಇಲಾಖೆ ತಿಳಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು, ದಿನ ನಿತ್ಯದ ಹಣ ಬದಲಾಣೆ ಮಿತಿಯನ್ನು ಕಡಿತಗೊಳಿಸಲಾಗಿದ್ದು, 4500 ರು. ದಿಂದ 2500ಕ್ಕೆ  ಕಡಿತಗೊಳಿಸಲಾಗಿದೆ. ಅಂತೆಯೇ ಕೃಷಿಕನೋರ್ವ ತನ್ನ ಬೆಳೆಗಾಗಿ ಇತರೆ ಕೃಷಿಕ ಚಟುವಟಿಕೆಗಳಿಗಾಗಿ ಒಂದು ವಾರಕ್ಕೆ ಗರಿಷ್ಢ 25000 ರು. ಹಣವನ್ನು ವಿತ್ ಡ್ರಾ ಮಾಡಬಹುದಾಗಿದ್ದು, ಇದು ಬೆಳೆ ಸಾಲಕ್ಕೂ ಅನ್ವಯವಾಗುತ್ತದೆ  ಎಂದು ತಿಳಿಸಿದರು. ಈ ರೀತಿ 25000 ರು. ಹಣ ವಿತ್ ಡ್ರಾ ಮಾಡುವ ಖಾತೆ ಕಡ್ಡಾಯವಾಗಿ ರೈತನ ಹೆಸರಿನಲ್ಲಿರಬೇಕು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ನೋಟುಗಳನ್ನು ನಿಷೇಧ ಮಾಡಿದ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ಸತತ 9 ದಿನಗಳೇ ಕಳೆದರೂ ಜನರ ಬವಣೆ ಮಾತ್ರ ನೀಗಿಲ್ಲ. ಇಂದೂ ಕೂಡ ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಹಣ ಬದಲಾವಣೆ ಮತ್ತು ಹಳೆಯ ನೋಟುಗಳನ್ನು ಠೇವಣಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ  ಈ ಕ್ರಮ ಕೈಗೊಂಡಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!