ನೋಟು ನಿಷೇಧವಾದರೇನು, ಲಂಚ ನಿಷಿದ್ಧವಲ್ಲ: ಸರ್ಕಾರಿ ಇಂಜಿನಿಯರ್ ಸಮರ್ಥನೆ 
ಪ್ರಧಾನ ಸುದ್ದಿ

ನೋಟು ನಿಷೇಧವಾದರೇನು, ಲಂಚ ನಿಷಿದ್ಧವಲ್ಲ: ಸರ್ಕಾರಿ ಇಂಜಿನಿಯರ್ ಸಮರ್ಥನೆ

ಕಪ್ಪುಹಣಕ್ಕೆ ಕತ್ತರಿ ಬೀಳುವುದು ಖಾತ್ರಿಯಾಗಿದ್ದರೂ ಲಂಚದ ಮೂಲಕ ಅಕ್ರಮ ಹಣ ಸಂಪಾದಿಸಿದವರಿಗೆ ಕಿಂಚಿತ್ತೂ ಆತಂಕ ಉಂಟಾಗಿಲ್ಲ ಎಂಬುದು ಉತ್ತರ ಪ್ರದೇಶದ ಭ್ರಷ್ಟ ಇಂಜಿನಿಯರ್ ಮಾತುಗಳು ಸ್ಪಷ್ಟಪಡಿಸುತ್ತವೆ.

ಲಖನೌ: 500, 1000 ರೂ ನೋಟುಗಳನ್ನು ನಿಷೇಧಿಸಿದ ನಂತರ ಕಪ್ಪುಹಣ ಹೊಂದಿರುವವರಿಗೆ ಸಂಕಷ್ಟ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಪ್ಪುಹಣಕ್ಕೆ ಕತ್ತರಿ ಬೀಳುವುದು ಖಾತ್ರಿಯಾಗಿದ್ದರೂ ಲಂಚದ ಮೂಲಕ ಅಕ್ರಮ ಹಣ ಸಂಪಾದಿಸಿದವರಿಗೆ ಕಿಂಚಿತ್ತೂ ಆತಂಕ ಉಂಟಾಗಿಲ್ಲ ಎಂಬುದು ಉತ್ತರ ಪ್ರದೇಶದ ಭ್ರಷ್ಟ ಇಂಜಿನಿಯರ್ ಮಾತುಗಳು ಸ್ಪಷ್ಟಪಡಿಸುತ್ತವೆ. 
ನ.8 ರಂದು ಪ್ರಧಾನಿ ನರೇಂದ್ರ ಮೋದಿ 500, 1000 ರೂ ನೋಟುಗಳ ನಿಷೇಧದ ನಿರ್ಧಾರವನ್ನು ಘೋಷಿಸಿದಾಗ ಕಂತೆ ಕಂತೆ ಲಂಚದ ಹಣ (4.8 ಮಿಲಿಯನ್ ರೂಪಾಯಿ) ಹೊಂದಿದ್ದ ಉತ್ತರ ಪ್ರದೇಶದ ಸರ್ಕಾರಿ ಇಂಜಿನಿಯರ್ ಗೆ ಪ್ರಾರಂಭದಲ್ಲಿ ಏನೂ ಅರ್ಥವಾಗಲಿಲ್ಲವಂತೆ. ಅದನ್ನು ಸ್ವತಃ ಆ ಅಧಿಕಾರಿಯೇ ಅಸೋಸಿಯೇಟೆಡ್ ಪ್ರೆಸ್ ಗೆ ಸಂಕೋಚವಿಲ್ಲದೇ ತಿಳಿಸಿದ್ದಾರೆ.    
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಘೋಷಿಸಿದಾಗ ಕರೆ ಮಾಡಿದ ಸ್ನೇಹಿತರು- ಸಹೋದ್ಯೋಗಿಗಳ ಧ್ವನಿಯಲ್ಲಿ ಹತಾಶ ಭಾವನೆ ಇತ್ತು. ಅವರ ಬಳಿಯೂ ಕಪ್ಪು ಹಣ ಇದೆ ಎಂಬುದು ನನಗೆ ತಿಳಿದಿತ್ತು. ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಲು ಇಷ್ಟು ಸಾಕು ಎಂದು ಇಂಜಿನಿಯರ್ ಹೇಳಿದ್ದಾರೆ. 
ಕೇಂದ್ರ ಸರ್ಕಾರದ ಘೋಷಣೆಯ ನಂತರವಾದರೂ ಲಂಚ ಸ್ವೀಕರಿಸುವ ಮೂಲಕ ಕಪ್ಪುಹಣ ಸಂಗ್ರಹಿಸಿದ್ದಕ್ಕಾಗಿ ಈ ಅಧಿಕಾರಿ ಪಶ್ಚಾತ್ತಾಪ ಪಟ್ಟಿದ್ದಾನೆಯೇ ಎಂದರೆ ಊಹೂಂ ಖಂಡಿತಾ ಇಲ್ಲ. ಅಸೋಸಿಯೇಟೆಡ್ ಪ್ರೆಸ್ ನೊಂದಿಗೆ ಮಾತನಾಡುತ್ತಾ ತನ್ನ ಹೆಸರನ್ನು ಗೌಪ್ಯವಾಗಿಡಬೇಕೆಂದು ಮನವಿ ಮಾಡಿರುವ ಉತ್ತರ ಪ್ರದೇಶದ ಸರ್ಕಾರಿ ಇಂಜಿನಿಯರ್ ಲಂಚ ತೆಗೆದುಕೊಳ್ಳುವುದು ಸರ್ಕಾರಿ ಕೆಲಸಗಳಲ್ಲಿ ನಿಷಿದ್ಧವಲ್ಲ. ಅಗತ್ಯವಿರುವ ಖರ್ಚು- ವೆಚ್ಚಗಳನ್ನು ಪೂರೈಸಿಕೊಳ್ಳಲು, ಹಾಗೂ ಕೆಲಸದಲ್ಲಿ ಮುನ್ನಡೆಯಲು ಕಮಿಷನ್ ರೂಪದಲ್ಲಿ ಹೆಚ್ಚು ಹಣ ಪಡೆಯುವುದು ಈಗಿನ ಅಗತ್ಯತೆ ಎಂದು ವಿಸ್ಕಿ ಹೀರುತ್ತಾ ಕಿಂಚಿತ್ತೂ ಪಾಪಪ್ರಜ್ಞೆ ಇಲ್ಲದೇ ಹೇಳಿಕೆ ನೀಡಿದ್ದಾರೆ. ಮೇಲಧಿಕಾರಿಗಳನ್ನು ತೃಪ್ತಿಪಡಿಸಲು ಪ್ರತಿ ಹಬ್ಬದ ಸಂದರ್ಭಗಳಲ್ಲಿ ಮೇಲಧಿಕಾರಿಗಳಿಗೆ ಹಾಗೂ ಅವರ ಮಕ್ಕಳಿಗೆ ಕೈಗಡಿಯಾರ, ಸೂಟ್ ಚಿನ್ನದ ಪೆಂಡೆಂಟ್ ಗಳಂತಹ ದುಬಾರಿ ಉಡುಗೊರೆಯನ್ನು ನೀಡಲಾಗುತ್ತಿತ್ತು. ಇವುಗಳನ್ನೆಲ್ಲಾ ನನ್ನ ಸಂಬಳದಿಂದ ನೀಡಬೇಕು ಅಂತೀರಾ? ಸಾಧ್ಯವೇ ಇಲ್ಲ. ಎಂದಿದ್ದಾರೆ ಸರ್ಕಾರಿ ಇಂಜಿನಿಯರ್.
ರಸ್ತೆ ನಿರ್ಮಾಣದಂತಹ ಯೋಜನೆಗಳಿಗೆ ಸಂಬಂಧಿಸಿದಂತೆ ಅಂದಾಜು ವೆಚ್ಚ ತಯಾರು ಮಾಡುವಾಗ ಕಮಿಷನ್ ರೂಪದಲ್ಲಿ ಲಂಚ ಪಡೆದಿರುವುದಾಗಿ ಹೇಳಿರುವ ಇಂಜಿನಿಯರ್, ಲಂಚವನ್ನು ನೇರವಾಗಿ ಕೇಳಬೇಕಿಲ್ಲ, ಸಾರ್ವಜನಿಕ ಟೆಂಡರ್ ನಿಂದ ಹಿಡಿದು ಯೋಜನೆ ಮುಕ್ತಾಯಗೊಳ್ಳುವವರೆಗೆ ಯೋಜನೆಯ ಪ್ರತಿ ಹಂತದಲ್ಲೂ ಅಕ್ರಮ ಹಣ ಕೈಗಳನ್ನು ಬದಲಾಯಿಸುತ್ತವೆ. ಸಚಿವರಿಂದ ಹಿಡಿಡು ಕಡೆಯ ಶ್ರೇಣಿಯ ನೌಕರನವರೆಗೆ ಬಹುತೇಕ ಎಲ್ಲರೂ ಈ ಕಮಿಷನ್ ಗಳ ಫಲಾನುಭವಿಗಳೇ. ಬೇರೆಯವರು ಪಡೆಯುವ ಲಂಚಕ್ಕೆ ಹೋಲಿಸಿದರೆ ನನ್ನದೇನೂ ಇಲ್ಲ ಎಂದು ನಿಷೇಧಗೊಂಡ ನೋಟುಗಳ ರಾಶಿಯನ್ನು ಹೊಂದಿರುವ ಇಂಜಿನಿಯರ್ ಕಪ್ಪುಹಣದ ವ್ಯಾಪ್ತಿಯನ್ನು ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ಘೋಷಣೆಯ ಹೊರತಾಗಿಯೂ ತನ್ನ ಬಹುತೇಕ ’ಉಳಿತಾಯ’ವನ್ನು ಸುರಕ್ಷಿತವಾಗಿರುಸುವಲ್ಲಿ ಯಶಸ್ವಿಯಾಗಿದ್ದಾರಂತೆ ಈ ಇಂಜಿನಿಯರ್, ಆದರೆ ಅದು ಹೇಗೆ ಎನ್ನುವುದನ್ನು ಮಾತ್ರ ವಿವರಿಸಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!