ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಹಳೆಯ ನೋಟು ಜಮಾವಣೆಗೆ ಡಿ.30 ಡೆಡ್ ಲೈನ್; ಯಾವುದೇ ಕಾರಣಕ್ಕೂ ವಿಸ್ತರಣೆ ಇಲ್ಲ: ಆರ್ ಬಿಐ

ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸ್ಪಷ್ಟಪಡಿಸಿದೆ.

ನವದೆಹಲಿ: 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ. ಈ  ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸ್ಪಷ್ಟಪಡಿಸಿದೆ.

ಇನ್ನು ಕಪ್ಪುಹಣ ಹೊಂದಿರುವ ಕಾಳಧನಿಕರಿಗೂ ಕೇಂದ್ರ ಸರ್ಕಾರ ಡೆಡ್ ಲೈನ್ ನೀಡಿದ್ದು, ಶೇ.50ರಷ್ಟು ತೆರಿಗೆಯೊಂದಿಗೆ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಬಹುದು. ಡೆಡ್ ಲೈನ್ ಮುಗಿದ ಬಳಿಕವೂ ಕಪ್ಪುಹಣ ಘೋಷಣೆ ಮಾಡವ  ಕಾಳಧಿನಕರಿಗೆ ಶೇ.85ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ತೆರಿಗೆ ಕಾರ್ಯಪ್ರವತ್ತವಾಗಿದ್ದು, 2.5ಲಕ್ಷಕ್ಕೂ ಅಧಿಕ ಹಣ ಠೇವಣಿ ಇರುವ ಖಾತೆಗಳ ಮೇಲೆ ನಿಗಾ  ಇರಿಸಿದೆ. ಅಲ್ಲದೆ ಶಂಕಾಸ್ಪದ ವಹಿವಾಟು ಕಂಡುಬಂದರೆ ಕೂಡ ವಿವರ ಕೋರಿ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.

ಹೊಸ ತೆರಿಗೆ ಕಾಯ್ದೆ ಜಾರಿಗೆ ಸಂವಿಧಾನದ ತೊಡಕು
ಇನ್ನು ಕೇಂದ್ರ ಸರ್ಕಾರದ ಉದ್ದೇಶಿತ ನೂತನ ತೆರಿಗೆ ಕಾಯ್ದೆ ಜಾರಿಗೆ ಸಂವಿಧಾನದ ತೊಡಕು ಎದುರಾಗಿದ್ದು, ಕೇಂದ್ರ ಸರ್ಕಾರ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದು ಅದರ ಮೂಲಕ ನೂತನ ಕಾನೂನು ಅಳವಡಿಸಿ ಬಳಿಕ ಸಂಸತ್ತಿನ  ಉಭಯ ಸದನಗಳ ಅನುಮೋದನೆ ಪಡೆಯಬೇಕು. ಆಗಷ್ಟೇ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ. ಆದರೆ ನೋಟು ನಿಷೇಧವನ್ನು ವಿರೋಧಿಸಿ ಉಭಯ ಕಲಾಪಗಳಲ್ಲಿ ಕೋಲಾಹಲ ಎಬ್ಬಿಸುತ್ತಿರುವ ವಿಪಕ್ಷ ಸದಸ್ಯರ  ನಡುವೆ ಸರ್ಕಾರದ ನೂತನ ಕಾಯ್ದೆಗೆ ಅನುಮೋದನೆ ದೊರೆಯುವುದೇ ಎಂಬ ಅನುಮಾನ ಕಾಡತೊಡಗಿದೆ. ಪ್ರಮುಖವಾಗಿ ಯಾವುದೇ ನೂತನ ಕಾಯ್ದೆ ಜಾರಿಯಲ್ಲಿ ನಿರ್ಣಾಯ ಪಾತ್ರ ನಿರ್ವಹಿಸುವ ರಾಜ್ಯಸಭೆಯಲ್ಲಿ ಕೇಂದ್ರ  ಸರ್ಕಾರ ಅಥವಾ ಎನ್ ಡಿಎ ಸರ್ಕಾರದ ಸದಸ್ಯ ಬಲ ಕಡಿಮೆ ಇದ್ದು, ರಾಜ್ಯಸಭೆಯಲ್ಲಿ ಸರ್ಕಾರದ ನಿರ್ಣಯಕ್ಕೆ ಅನುಮೋದನೆ ಸಿಗುವುದು ಕಷ್ಟಸಾಧ್ಯ.

ಹೀಗಾಗಿ ರಾಜ್ಯಸಭೆಯಲ್ಲಿ ಅಲ್ಪ ಸಂಖ್ಯಾತವಾಗಿರುವ ಕೇಂದ್ರ ಸರ್ಕಾರ ಹೊಸ  ತೆರಿಗೆ ಕಾಯ್ದೆಗೆ ಹೇಗೆ ಅನುಮೋದನೆ ಪಡೆಯುತ್ತದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಇನ್ನು ನೂತನ ತೆರಿಗೆ ಕಾಯ್ದೆ ಜಾರಿ ವಿಳಂಬವಾದಷ್ಟೂ ಕಾಳಧನಿಕರು ತಮ್ಮಲ್ಲಿರುವ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ವಿವಿಧ  ವಾಮಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ಹೀಗಾಗಿ ಸರ್ಕಾರದ ಈ ಪ್ರಯತ್ನ ಕೂಡ ನೀರಲ್ಲಿ ಹೋಮ ಮಾಡಿದಂತೆ ಆಗುತ್ತದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!