ಪ್ರಧಾನ ಸುದ್ದಿ

ಭಾರತ 2016 ರಲ್ಲಿ 90 ಬಾರಿ ಕದನವಿರಾಮ ಉಲ್ಲಂಘಿಸಿದೆ: ಪಾಕಿಸ್ತಾನ

Guruprasad Narayana
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ, 2003 ರ ಕನವಿರಾಮವನ್ನು ಭಾರತ 90 ಬಾರಿ ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಸೋಮವಾರ ಆರೋಪಿಸಿದೆ. 
"2016 ರಲ್ಲಿ ಭಾರತ 90 ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ. ಇದು ನಿಲ್ಲಬೇಕು" ಎಂದು ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಜಕ್ರಿಯಾ ಟ್ವೀಟ್ ಮಾಡಿದ್ದಾರೆ. 
ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರಲು ಶಾಂತಿ ಕೆಡಿಸುವ ಹೇಳಿಕೆಗಳನ್ನು ನೀಡುವುದು ಮತ್ತು ಪ್ರಚಾರ ಮಾಡುವುದು, ಕೆಸರೆರಚಾಟದ ಮೂಲಕ ಉದ್ವಿಘ್ನ ಪರಿಸ್ಥಿತಿ ಉಂಟುಮಾಡುವುದು ಶಾಂತಿ ಪ್ರಕ್ರಿಯೆಗೆ ಅತಿ ದೊಡ್ಡ ತಡೆಯಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. 
ಪಾಕಿಸ್ತಾನ "ಎಂದಿಗೂ ಕದನವಿರಾಮ ಉಲ್ಲಂಘಿಸಿಲ್ಲ" ಎಂದು ಹೇಳಿಕೊಂಡಿರುವ ಜಕ್ರಿಯಾ, ಭಾರತೀಯ ಮಾಧ್ಯಮಗಳು ಕದನವಿರಾಮ ಉಲ್ಲಂಘನೆಯ ಬಗ್ಗೆ ಎಂದಿಗೂ ತಪ್ಪು ಮಾಹಿತಿ ನೀಡುತ್ತವೆ ಎಂದಿದ್ದಾರೆ. 
ಭಾನುವಾರ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಗುಂಡಿನ ಕಾಳಗ ನಡೆಸಿದ್ದವು. 
SCROLL FOR NEXT