ಅಕುಲಾ-2 ಜಲಾಂತರ್ಗಾಮಿ ನೌಕೆ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ರಷ್ಯಾದಿಂದ ಭಾರತಕ್ಕೆ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ!

ರಷ್ಯಾದಿಂದ ಈಗಾಗಲೇ ಒಂದು ಜಲಾಂತರ್ಗಾಮಿ ನೌಕೆಯನ್ನು ಪಡೆದಿರುವ ಭಾರತ ಇದೀಗ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಒಪ್ಪಂದಕ್ಕೆ ಸಹಿಹಾಕಿದೆ.

ಮಾಸ್ಕೋ: ರಷ್ಯಾದಿಂದ ಈಗಾಗಲೇ ಒಂದು ಜಲಾಂತರ್ಗಾಮಿ ನೌಕೆಯನ್ನು ಪಡೆದಿರುವ ಭಾರತ ಇದೀಗ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ  ಒಪ್ಪಂದಕ್ಕೆ ಸಹಿಹಾಕಿದೆ.

ತೀರಾ ಗೌಪ್ಯವಾಗಿ ನಡೆದಿದ್ದ ಈ ಒಪ್ಪಂದ ಸಹಿ ಪ್ರಕ್ರಿಯೆ ಗೋವಾದಲ್ಲೇ ನಡೆದಿದ್ದು, ಈ ವರೆಗೂ ಈ ವಿಚಾರ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಇದೀಗ ರಷ್ಯಾ ಈ ಬಗ್ಗೆ ಮಾಹಿತಿ ನೀಡಿದ್ದು,  ರಷ್ಯಾದ ಖ್ಯಾತ ಪತ್ರಿಕೆ ವೆಡೋಮೊಸ್ಟಿ ಈ ಬಗ್ಗೆ ವರದಿ ಮಾಡಿದೆ. ಈ ಹಿಂದೆ ಬ್ರಿಕ್ಸ್ ಶೃಂಗಸಭೆ ನಿಮಿತ್ತ ಭಾರತಕ್ಕೆ ಆಗಮಿಸಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗೋವಾಕ್ಕೆ ತೆರಳಿದ್ದ  ವೇಳೆ ಉಭಯ ದೇಶಗಳು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ವರದಿಯಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ ಅಕುಲಾ-2 ಜಲಾಂತರ್ಗಾಮಿ ನೌಕೆಯನ್ನು ಭಾರತ ಖರೀದಿಸಿದ್ದು, ಇದೇ ಸರಣಿಯ ಮೊದಲನೇ ಜಲಾಂತರ್ಗಾಮಿ ನೌಕೆಯನ್ನು 2011ರಲ್ಲೇ ಭಾರತ ಲೀಸ್ ಗೆ ಪಡೆದಿತ್ತು.  ಇದೀಗ ಅಕುಲಾ-2 ಜಲಾಂತರ್ಗಾಮಿ ನೌಕೆ ಸೇರ್ಪಡೆಯೊಂದಿಗೆ ರಷ್ಯಾದಿಂದ ಭಾರತ 2ನೇ ಜಲಾಂತರ್ಗಾಮಿ ನೌಕೆ ಪಡೆದಂತಾಗಿದೆ. 2011ರಲ್ಲಿ ಭಾರತ ಲೀಸ್ ಗೆ ಪಡೆದಿದ್ದ ಅಕುಲಾ  ಜಲಾಂತರ್ಗಾಮಿಯ ಸೇವಾ ಅವಧಿ 10 ವರ್ಷಗಳಾಗಿದ್ದು, ಕೆಲವೇ ವರ್ಷಗಳಲ್ಲಿ ಅದರ ಸೇವೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ಭಾರತ ಮತ್ತೊಂದು ಜಲಾಂತರ್ಗಾಮಿ  ನೌಕೆಯನ್ನು ಲೀಸ್ ಗೆ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ