ಐಎನ್ ಎಸ್ ತಿಹಾಯು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಭಾರತೀಯ ನೌಕಾಪಡೆಗೆ ಮತ್ತೊಂದು ಅಸ್ತ್ರ; ಐಎನ್ಎಸ್ ತಿಹಾಯು ಸೇನೆಗೆ ಸೇರ್ಪಡೆ

ಅತ್ಯಾಧುನಿಕ ಐಎನ್ ಎಸ್ ಅರಿಹಂತ್ ಸೇನೆಗೆ ಸೇರ್ಪಡೆಯಾದ ಬೆನ್ನಲ್ಲೇ ಮತ್ತೊಂದು ಅತ್ಯಾಧುನಿಕ ನೌಕೆ ಐಎನ್ ಎಸ್ ತಿಹಾಯು ಭಾರತೀಯ ಸೇನೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ.

ನವದೆಹಲಿ: ಅತ್ಯಾಧುನಿಕ ಐಎನ್ ಎಸ್ ಅರಿಹಂತ್ ಸೇನೆಗೆ ಸೇರ್ಪಡೆಯಾದ ಬೆನ್ನಲ್ಲೇ ಮತ್ತೊಂದು ಅತ್ಯಾಧುನಿಕ ನೌಕೆ ಐಎನ್ ಎಸ್ ತಿಹಾಯು ಭಾರತೀಯ ಸೇನೆಯಲ್ಲಿ ಕರ್ತವ್ಯಕ್ಕೆ  ನಿಯೋಜನೆಗೊಂಡಿದೆ.

ಶತ್ರು ಪಾಳಿಯದ ಯಾವುದೇ ರೀತಿಯ ಯುದ್ಧ ವಾಹನಗಳ ಮೇಲೆ ತ್ವರಿತಗತಿಯಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಐಎನ್ ಎಸ್ ತಿಹಾಯು ಬುಧವಾರ ಸೇನೆಗೆ ಸೇರ್ಪಡೆಗೊಂಡಿದೆ.   ನೌಕಾಪಡೆಯ ಪೂರ್ವ ವಿಭಾಗದ ಮುಖ್ಯಸ್ಥ ಎಚ್ ಸಿಎಸ್ ಬಿಷ್ಟ್ ಅವರು ಐಎನ್ ಎಸ್ ತಿಹಾಯುವನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

ತಾಂತ್ರಿಕವಾಗಿ ಸಾಕಷ್ಟು ಸಮೃದ್ಧವಾಗಿರುವ ಐಎನ್ ಎಸ್ ತಿಹಾಯು ಅತ್ಯಾಧುನಿಕ ರಾಡಾರ್ ವ್ಯವಸ್ಥೆಯನ್ನು ಹೊಂದಿದ್ದು, ಇದರಿಂದ ಶತ್ರುಪಾಳಯದ ಯಾವುದೇ ನೌಕೆ ಅಥವಾ ಯುದ್ಧ  ವಿಮಾನ ಗಡಿ ದಾಟಿ ಅತಿಕ್ರಮ ಪ್ರವೇಶ ಮಾಡಿದರೆ ಕಲವೇ ನಿಮಿಷದಲ್ಲಿ ಅದರ ವಿರುದ್ಧ ದಾಳಿಗೆ ಸಿದ್ಧವಾಗುತ್ತದೆ. ಅಲ್ಲದೆ  ಕ್ಷಣಾರ್ಧದಲ್ಲಿ ಅಂತಹ ನೌಕೆಗಳನ್ನು ಹೊಡೆದುರುಳಿಸುವ ಸಾಮರ್ಥ್ಯ  ಐಎನ್ ಎಸ್ ತಿಹಾಯುಗೆ ಇದೆ. ಪ್ರಸ್ತುತ ಸೇನೆಗೆ ಸೇರ್ಪಡೆಯಾಗಿರುವ ಈ ವಿಶೇಷ ನೌಕೆಯನ್ನು ಪ್ರಮುಖವಾಗಿ ಗಸ್ತು ತಿರುಗಲು, ರಕ್ಷಣಾ ಕಾರ್ಯಾಚರಣೆಯಲ್ಲಿ ಹಾಗೂ ಸಮುದ್ರಗಳ್ಳರ  ವಿರುದ್ಧದ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಈಗಾಗಲೇ ಇಂತಹ ಆರು ನೌಕೆಗಳಿದ್ದು, ಈ ಎಲ್ಲ ನೌಕೆಗಳು ಪೂರ್ವ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಚೆನ್ನೈನಲ್ಲಿ ನಾಲ್ಕು ನೌಕೆಗಳು ಕಾರ್ಯ  ನಿರ್ಹಹಿಸುತ್ತಿದ್ದರೆ, 2 ನೌಕೆಗಳು ವಿಶಾಖಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಸೇನೆಗೆ ಸೇರ್ಪಡೆಯಾಗಿರುವ ನೌಕೆಯನ್ನು ಕಮಾಂಡರ್ ಅಜಯ್ ಕಶೋವ್ ಅವರು ಮುನ್ನಡೆಸಲಿದ್ದು,  ಅವರಿಗೆ ನೌಕಾಪಡೆಯ 41 ಸಿಬ್ಬಂದಿಗಳು ನೆರವಾಗಲಿದ್ದಾರೆ.

ಐಎನ್ ಎಸ್ ತಿಹಾಯು ವಿಶೇಷತೆ

  • ನೌಕೆ ವಾಟರ್ ಜೆಟ್ ಪ್ರಾಪಲ್ಶನ್ ಸಿಸ್ಟಮ್ ಹೊಂದಿದ್ದು, ನೌಕೆಯಲ್ಲಿರುವ ಅತ್ಯಾಧುನಿಕ ಡೀಸೆಲ್ ಎಂಜಿನ್ 2,720 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
  • ನೌಕೆಯು  315 ಟನ್ ತೂಕಹೊಂದಿದ್ದು, ಪ್ರತೀ ಗಂಟೆಗೆ 65 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
  • ನೂತನ ಸಂವಹನ ಉಪಕರಣ, ಅತ್ಯಾಧುನಿಕ ರಾಡಾರ್ ವ್ಯವಸ್ಥೆಯನ್ನು ನೌಕೆಗೆ ಅಳವಡಿಸಲಾಗಿದೆ.
  • ಇನ್ನು ನೌಕೆಗೆ  ದೇಶೀಯವಾಗಿ ನಿರ್ಮಿಸಿರುವ 30 ಎಂಎಂ ಗಾತ್ರದ ಸಿಆರ್ ಎನ್ ಗನ್ ಅಳವಡಿಸಲಾಗಿದ್ದು, ಶತ್ರು ಪಾಳಯದ ಮೇಲೆ ಕ್ಷಣಾರ್ಧದಲ್ಲಿ ದಾಳಿ ನಡೆಸುತ್ತದೆ. ಇದಲ್ಲದೆ ನೌಕೆಯು 11 ವಿವಿಧ  ಮಾದರಿಯ ಮೆಷಿನ್ ಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನೂ ಕೂಡ ಹೊಂದಿದೆ.
  • ನೌಕೆಗೆ ಐಜಿಎಲ್ ಎ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಈ ಕ್ಷಿಪಣಿ ವ್ಯವಸ್ಥೆಯು  ಮೇಲ್ಮೈನಿಂದ ಆಕಾಶಕ್ಕೆ ಹಾರಿ ಶತ್ರುಪಾಳಯದ ನೌಕೆಗಳನ್ನು ಹಾಗೂ ವಿಮಾನಗಳನ್ನು ಧ್ವಂಸ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT