ಪ್ರಧಾನ ಸುದ್ದಿ

ಜಯಾ ಆರೋಗ್ಯದ ಬಗ್ಗೆ ವದಂತಿಗೆ ಬಂಧನ ಉತ್ತರವಲ್ಲ: ಎನ್ಎಚ್ಆರ್ ಸಿ

Lingaraj Badiger
ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯಕ್ಕೆ ಸಂಬಂಧಿಸಿದ ವದಂತಿಗಳೆ ಜನರ ಬಂಧನ ಉತ್ತರವಲ್ಲ. ಅದಕ್ಕೆ ಬೇರೆ ದಾರಿಗಳಿವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ ಸಿ)ದ ಅಧ್ಯಕ್ಷೆ ನ್ಯಾ.ಎಚ್.ಎಲ್.ದತ್ತು ಅವರು ಹೇಳಿದ್ದಾರೆ.
ಇತ್ತೀಚಿಗೆ ತಮಿಳುನಾಡು ಸಿಎಂ ಆರೋಗ್ಯ ಕುರಿತ ವದಂತಿಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಹಲವರನ್ನು ಬಂಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದತ್ತು, ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ. ಇದನ್ನು ಸುಪ್ರೀಂ ಕೋರ್ಟ್ ಸಾಕಷ್ಟು ಬಾರಿ ಹೇಳಿದೆ. ಇತ್ತೀಚಿನ ತೀರ್ಪಿನಲ್ಲೂ ಐಪಿಸಿ ಸೆಕ್ಷೆನ್ 500 ಅಥವಾ 505ರಡಿ ಬಂಧನ ವದಂತಿಗೆ ಉತ್ತರವಲ್ಲ. ವದಂತಿಗಳನ್ನು ತಡೆಯಲು ಬೇರೆ ಮಾರ್ಗಗಳಿವೆ ಎಂದರು.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು, ಅಂದಿನಿಂದ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ, ವಾಟ್ಸ್ ಆಪ್ ನಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು.
SCROLL FOR NEXT