ಹಲಸೂರು ಸರ್ಕಾರಿ ಆಸ್ಪತ್ರೆ ಬಳಿ ನಿಲ್ಲಿಸಿರುವ ಶ್ರದ್ಧಾಂಜಲಿ ವಾಹನ 
ಪ್ರಧಾನ ಸುದ್ದಿ

ಶ್ರದ್ಧಾಂಜಲಿ ವಾಹನ: ಮತ್ತೊಂದು ಒಡಿಶಾವಾಗುತ್ತಿದೆಯಾ ಕರ್ನಾಟಕ?

ಒಡಿಶಾದಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿ, ಕೊನೆಗೆ ಪತ್ನಿಯ ಶವವನ್ನು....

ಬೆಂಗಳೂರು: ಒಡಿಶಾದಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿ, ಕೊನೆಗೆ ಪತ್ನಿಯ ಶವವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಒಡಿಶಾ ಸರ್ಕಾರ ಮಹಾಪ್ರಯಾಣ ಎಂಬ ಯೋಜನೆ ಆರಂಭಿಸಿದ್ದು, ರಾಜ್ಯದ್ಯಂತ ಪ್ರತಿ ಜಿಲ್ಲಾಸ್ಪತ್ರೆಯ ಬಳಿ ಶವ ಸಾಗಿಸುವ 30 ವಾಹನ ನಿಲ್ಲಿಸಲಾಗುತ್ತಿದೆ.
ಕರ್ನಾಟಕದ ಪರಿಸ್ಥಿತಿಯೂ ಒಡಿಶಾಗಿಂತ ವಿಭಿನ್ನವಾಗಿಲ್ಲ. ಕಳೆದ ವರ್ಷ ಮಾರ್ಚ್ ನಿಂದ ಶವ ಸಾಗಿಸಲು ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಶ್ರದ್ಧಾಂಜಲಿ ವಾಹನ ನಿಯೋಜಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ ಅದು ಇದುವರೆಗೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ.
ಈ ಸೇವೆಯಡಿ ಪ್ರತಿ ಜಿಲ್ಲಾಸ್ಪತ್ರೆಯ ಬಳಿ 30 ವಾಹನಗಳಿರಬೇಕು. ಆದರೆ ಒಂದು ಎರಡು ವಾಹನಕ್ಕೂ ಗತಿಯಿಲ್ಲದಂತಾಗಿದೆ. ರಾಜ್ಯ ಸರ್ಕಾರ ಹಳೆ ಆಂಬುಲೆನ್ಸ್ ಗಳನ್ನೇ ಶ್ರದ್ಧಾಂಜಲಿ ವಾಹನವನ್ನಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಆದರೆ ಇದಕ್ಕೆ ಬೇಕಾದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ.
ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾತ್ರ ಶ್ರದ್ಧಾಂಜಲಿ ವಾಹನಗಳನ್ನು ಬಳಸುತ್ತಿದ್ದು, ಟೌನ್ ಹಾಲ್ ಬಳಿ 11 ಹಾಗೂ ಹಲಸೂರಿನಲ್ಲಿ 9 ವಾಹನಗಳನ್ನು ನಿಯೋಜಿಸಲಾಗಿದೆ. 2015-16ನೇ ಸಾಲಿನಲ್ಲಿ ಈ 20 ವಾಹನಗಳು ಒಟ್ಟು 8,701 ಶವಗಳನ್ನು ಆಸ್ಪತ್ರೆಯಿಂದ ಅವರ ಮನೆಗಳಿಗೆ ಸಾಗಿಸಿವೆ. ಈ ವಾಹನಕ್ಕೆ ಪ್ರತಿ ಗಂಟೆಗೆ 15 ರುಪಾಯಿ ಚಾರ್ಜ್ ಮಾಡಲಾಗುತ್ತದೆ. 
ಇನ್ನು ಜಿಲ್ಲಾಸ್ಪತ್ರೆಗಳ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಸರ್ಜನ್ ಡಾ.ಕೆ.ಜಗದೀಶ್ ಅವರು, ನಮ್ಮ ಆಸ್ಪತ್ರೆಯಲ್ಲಿ ವಾಹನ ಇದೆ. ಆದರೆ ಅನಧಿಕೃತವಾಗಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ ಎಂದಿದ್ದಾರೆ.
ಈ ವರ್ಷ ಜೂನ್ 24ರಿಂದ ಶ್ರದ್ಧಾಂಜಲಿ ಸೇವೆಯನ್ನು ಆರಂಭಿಸಲಾಗಿದೆ. ಆದಾಗ್ಯೂ ಈ ಬಗ್ಗೆ ಸರ್ಕಾರದ ಅಧಿಕೃತ ಆದೇಶ ಇಲ್ಲ. ಆದರೂ ನಾವೂ ಆಸ್ಪತ್ರೆಯಿಂದ ಶವ ಸಾಗಿಸಲು ಹಲವು ಬಡವರಿಗೆ ಸಹಾಯ ಮಾಡಿದ್ದೇವೆ. ಆದರೆ ಕಳಪೆ ವಾಹನ ಎಂಬ ಕಾರಣಕ್ಕೆ ಬಹಳಷ್ಟು ಜನ ಖಾಸಗಿ ವಾಹನವನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!