ನೌಕಾ ಪ್ರವೇಶ ಪರೀಕ್ಷೆಯಲ್ಲಿ ಉಂಟಾದ ಗೊಂದಲಮಯ ವಾತಾವರಣದ ದೃಶ್ಯ
ಮುಂಬೈ: ಮಲಾಡ್ ನ ಐ ಎನ್ ಎಸ್ ಹಂಲಾದಲ್ಲಿ ನಡೆಯುತಿದ್ದ ನೌಕಾ ಪ್ರವೇಶ ಪರೀಕ್ಷೆಯ ಸಮಯದಲ್ಲಿ ನೂಕುನುಗ್ಗಲು ಮತ್ತು ಕಾಲ್ತುಳಿತಕ್ಕೆ ಹಲವರು ಗಾಯಗೊಂಡಿರುವ ಸಾಧ್ಯತೆ ಇದೆ.
ಭಾರತೀಯ ನೌಕಾ ದಳದ ಮುಕ್ತ ಪ್ರವೇಶ ಪರೀಕ್ಷೆಗೆ ನಿಯಂತ್ರಿಸಲಾಗದಷ್ಟು ಗುಂಪು ಸೇರಿತ್ತು, ಆದರೆ ನಂತರ ಪ್ರಾದೇಶಿಕ ಪೊಲೀಸ್ ಮತ್ತು ನೌಕಾ ಅಧಿಕಾರಿಗಳನ್ನು ಗುಂಪನ್ನು ನಿಯಂತ್ರಿಸಿತು ಎಂದು ತಿಳಿದುಬಂದಿದೆ.
ಸುಮಾರು 4000 ಅಭ್ಯರ್ಥಿಗಳು ಸೇರುವ ನಿರೀಕ್ಷೆಯಿದ್ದರೆ, ಅಲ್ಲಿ 6000 ಕ್ಕೂ ಹೆಚ್ಚು ಅಭ್ಯರ್ಥಿಗಳು ನೆರೆದಿದ್ದರಿಂದ ದಾಂಧಲೆ ರೀತಿಯ ಪರಿಸ್ಥಿತಿ ಉಂಟಾಗಿತ್ತು.
"ಸೀನಿಯರ್ ಸೆಕಂಡರಿ ಅಧಿಕಾರಿ ಹುದ್ದೆಗೆ ಮುಂಬೈನ ಮಲಾಡ್ ನ ಐ ಎನ್ ಎಸ್ ಹಂಲಾದಲ್ಲಿ ಆಯ್ಕೆ ರ್ಯಾಲಿ ನಡೆದಿತ್ತು. ನಾವು ಹೆಚ್ಚಿನ ಅಭ್ಯರ್ಥಿಗಳನ್ನು ನಿರೀಕ್ಷಿಸಿದ್ದೆವು ಆದರೆ ನಿರೀಕ್ಷೆಗೂ ಮೀರಿ ಹೆಚ್ಚು ಜನ ನೆರೆದಿದ್ದರಿಂದ ಗುಂಪಿನಲ್ಲಿ ಗೊಂದಲಮಯ ವಾತಾವರಣ ಉಂಟಾಗಿ ನಂತರ ಪ್ರಾದೇಶಿಕ ಪೊಲೀಸರು ಮತ್ತು ನೌಕಾ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈಗ ಆಯ್ಕೆ ಪ್ರಕ್ರಿಯೆ ಸರಾಗವಾಗಿ ನಾಗುತ್ತಿದೆ" ಎಂದು ನೌಕಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರು ಹೆಚ್ಚಿದ್ದರಿಂದ, ಆಯ್ಕೆ ಪ್ರಕ್ರಿಯೆಗೆ ಇದ್ದ ಪರೀಕ್ಷೆಯ ಉತ್ತೀರ್ಣ ಅಂಕ ನಿರ್ಬಂಧವನ್ನು 50% ಇಂದ 60% ಗೆ ಏರಿಸಿದ್ದನ್ನು ಕೆಲವರು ಸ್ಥಳದಲ್ಲೇ ವಿರೋಧಿಸಿದ್ದರಿಂದ ಈ ಗೊಂದಲಕ್ಕೆ ಕಾರಣವಾಯಿತು ಎಂದು ಹಲವು ಅಭ್ಯರ್ಥಿಗಳು ದೂರಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.