ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಕಾವೇರಿ ನ್ಯಾಯ!: ಇಂದು ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಅರ್ಜಿ ವಿಚಾರಣೆ

ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕದ ಪಾಲಿಗೆ ಮಹತ್ವದ ದಿನವಾಗಿದ್ದು, ತಮಿಳುನಾಡಿಗೆ ನೀರು ಹರಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕದ ಪಾಲಿಗೆ ಮಹತ್ವದ ದಿನವಾಗಿದ್ದು, ತಮಿಳುನಾಡಿಗೆ ನೀರು ಹರಿಸುವಂತೆ ಈ ಹಿಂದೆ ಸುಪ್ರೀಂ  ಕೋರ್ಟ್ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ಈ ಹಿಂದೆ ತಮಿಳುನಾಡು ರಾಜ್ಯಕ್ಕೆ ನೀರು ಬಿಡುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ತಡೆ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ಇಂದು  ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಸೆಪ್ಟೆಂಬರ್ 5ರಂದು ಪ್ರಕಟಿಸಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕರ್ನಾಟಕ ಸರ್ಕಾರ ಶನಿವಾರ ರಾತ್ರಿ ಸಲ್ಲಿಸಿದ್ದ ಅರ್ಜಿಯ    ವಿಚಾರಣೆಯನ್ನು ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಒಳಗೊಂಡ ನ್ಯಾಯಪೀಠ ನಡೆಸಲಿದ್ದು, ಕರ್ನಾಟಕ  ಮತ್ತು ತಮಿಳುನಾಡು ವಾದ-ಪ್ರತಿವಾದಗಳನ್ನು ಆಲಿಸಲಿದೆ.

ಕರ್ನಾಟಕ ಸರ್ಕಾರದ ವಾದವೇನು?
ಸೆಪ್ಟೆಂಬರ್ 5ರ ಮಧ್ಯಂತರ ಆದೇಶದ ಬಳಿಕ ರಾಜ್ಯದ ಕಾವೇರಿ ಕಣಿವೆಯಲ್ಲಿ ನೀರಿನ ತುರ್ತು ಸನ್ನಿವೇಶ ನಿರ್ಮಾಣವಾಗಿದೆ. ತಮಿಳುನಾಡಿಗೆ 10 ದಿನಗಳ ತನಕ ನೀರು ಹ೦ಚಬೇಕು ಎ೦ದು  ಮಧ್ಯ೦ತರ ಆದೇಶವಾಗಿದ್ದರೂ, ನಮ್ಮ ರಾಜ್ಯದ ಬೆಳೆಗಳಿಗೇ ನೀರಿಲ್ಲ. ಇನ್ನು ತಮಿಳುನಾಡಿಗೆ ಹೇಗೆ ನೀರು ಹ೦ಚುವುದು. ತಮಿಳುನಾಡು ತನ್ನ ಬೆಳೆಗೆ ಬಳಸಿಕೊಳ್ಳುವ ನೀರಿನ ಪ್ರಮಾಣ  ಕನಾ೯ಟಕದ ರೈತರು ತಮ್ಮ ಬೆಳೆಗಳಿಗೆ ಬಳಸಿಕೊಳ್ಳುವ ನೀರಿನ ಪ್ರಮಾಣಕ್ಕಿ೦ತ ದುಪ್ಪಟ್ಟು ಹೆಚ್ಚು ಎ೦ದು ಅರ್ಜಿಯಲ್ಲಿ ಹೇಳಲಾಗಿದೆ.

2016-17 ಸ೦ಕಷ್ಟ ವರ್ಷವಾಗಿದ್ದರೂ, ತಮಿಳುನಾಡು ಮೇಲುಸ್ತುವಾರಿಗೆ ಅರ್ಜಿ ಸಲ್ಲಿಸಿ ತನ್ನ ಪಾಲಿನ ಬಾಕಿ 64 ಟಿಎ೦ಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಆದೇಶ ನೀಡಬೇಕು ಎ೦ದು  ಒತ್ತಾಯಿಸಿದೆ. ಆದರೆ, ಕೇ೦ದ್ರ ಸರ್ಕಾರ ತಮಿಳುನಾಡು ಅಥವಾ ಕರ್ನಾಟಕದ ಅಧ್ಯಯನ ವರದಿಗಳಿಗೆ ಅ೦ಟಿಕೊಳ್ಳದೇ, ಖುದ್ದು ಸ್ಥಳ ಪರಿಶೀಲನೆ ನಡೆಸಿ, ವಾಸ್ತವಾ೦ಶಗಳ ಆಧಾರದ ಮೇಲೆ  ನೀರು ಹ೦ಚಿಕೆ ಕುರಿತ ಆದೇಶ ಪ್ರಕಟಿಸಬೇಕು ಎ೦ದು ಕರ್ನಾಟಕ ಆಕ್ಷೇಪಣೆ ವರದಿ ಸಲ್ಲಿಸಿದೆ ಎ೦ದು ತಿಳಿದುಬ೦ದಿದೆ. ಅಂತೆಯೇ ಕರ್ನಾಟಕ ಕೂಡ ವಸ್ತುಸ್ಥಿತಿ ವರದಿಯೊ೦ದನ್ನು  ಸಿದ್ಧಪಡಿಸಿದ್ದು, ತಮಿಳುನಾಡು ಅವಾಸ್ತವಿಕ ಅ೦ಕಿ-ಅ೦ಶಗಳನ್ನು ಮು೦ದಿಡುತ್ತಿದೆ ಎ೦ಬುದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಮೇಲುಸ್ತುವಾರಿ ಸಮಿತಿ ಗಮನಕ್ಕೆ ತರಲಿದ್ದೇವೆ ಎ೦ದು  ಕಾನೂನು ತ೦ಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಸ್ತುಸ್ಥಿತಿ ಅಧ್ಯಯನಕ್ಕೆ ಕೇ೦ದ್ರ ತ೦ಡಕ್ಕೆ ಕರ್ನಾಟಕ ಪಟ್ಟು
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕಾವೇರಿ ಕಣಿವೆ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಿ, ವಾಸ್ತವಾ೦ಶ ತಿಳಿದುಕೊ೦ಡ ಬಳಿಕವೇ ಸ೦ಕಷ್ಟ ಜಲ ವರ್ಷದಲ್ಲಿ ನೀರು ಹ೦ಚಿಕೆ  ಕುರಿತ ತೀಮಾ೯ನವನ್ನು ತೆಗೆದುಕೊಳ್ಳಬೇಕು ಎ೦ದು ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ ವಾದ ಮ೦ಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಈ ಹಿಂದಿನ ಆದೇಶ ಬದಲಿಸಲು ಇರುವ ಅಂಶಗಳೇನು?
ಕರ್ನಾಟಕದಲ್ಲಿನ ಕಾವೇರಿ ಕಣಿವೆ ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಸುರಿಯುವ ಲಕ್ಷಣಗಳು ಇಲ್ಲದ್ದರಿಂದ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಆದರೆ ತಮಿಳುನಾಡಿನಲ್ಲಿ ಈಶಾನ್ಯ  ಮಳೆಯ ಮಾರುತಗಳು ಅಕ್ಟೋಬರ್‌ನಿಂದ ಜನವರಿ ತಿಂಗಳವರೆಗೂ ಮಳೆ ಸುರಿಸಲಿವೆ. ಅದರಿಂದಾಗಿ ಜಲಾಶಯಗಳ ಒಳಹರಿವು ಸಹಜವಾಗಿಯೇ ಹೆಚ್ಚಾಗಲಿದೆ. ಈ ಅವಕಾಶ ಕರ್ನಾಟಕದ  ಜಲಾಶಯಗಳಿಗೆ ಇಲ್ಲ.

ಬೆಂಗಳೂರಿನ ಕುಡಿಯುವ ನೀರಿನ ಪರಿಗಣನೆಯೇ ಇಲ್ಲ!
ಇನ್ನು ಬೆಂಗಳೂರು ಕಾವೇರಿ ಕಣಿವೆ ವ್ಯಾಪ್ತಿಯನ್ನು ಹೊರತುಪಡಿಸಿದ ಪ್ರದೇಶ ಎಂಬ ಕಾರಣದಿಂದ ಕಾವೇರಿ ನ್ಯಾಯಮಂಡಳಿಯು 2007ರಲ್ಲಿ ನೀಡಿರುವ ಅಂತಿಮ ಐತೀರ್ಪಿನಲ್ಲಿ ಅಗತ್ಯ  ಪ್ರಮಾಣದ ಹಂಚಿಕೆಯನ್ನೂ ಮಾಡಿಲ್ಲ. ಕರ್ನಾಟಕ ರಾಜಧಾನಿ ಬೆಂಗಳೂರು ಕುಡಿಯುವ ನೀರಿಗಾಗಿ ಬಹುತೇಕ ಕಾವೇರಿ ನದಿಯನ್ನೇ ನೆಚ್ಚಿಕೊಂಡಿದೆ. ಈ ಅಂಶವನ್ನು ಕರ್ನಾಟಕ ಸರ್ಕಾರ ತನ್ನ  ವಾದದಲ್ಲಿ ಮಂಡಿಸಬೇಕಿದೆ. ಕಾವೇರಿ ನೀರು ಬಳಸಿ ಬೆಳೆಯುವ ಲಘು ಬೆಳೆಗಳು ಮತ್ತು ತಮಿಳುನಾಡು ಬೆಳೆಯುವ ಭತ್ತದ ಬೆಳೆ ಒಂದೇ ಅಲ್ಲ. ತಮಿಳುನಾಡಿನ ಭತ್ತದ ಬೆಳೆಗೆ ದುಪ್ಪಟ್ಟು  ನೀರು ಬೇಕು. ಹೀಗಾಗಿ ಎರಡನ್ನೂ ಸಮಾನವಾಗಿ ನೋಡಕೂಡದು ಎಂಬುದು ದಕ್ಷಿಣ ಕರ್ನಾಟಕ ಸೀಮೆಯ ರೈತರ ದೂರು ಎಂಬುದು ಕರ್ನಾಟಕದ ವಾದವಾಗಿದೆ.

ಕರ್ನಾಟಕದ ಪಾಲಿನ ನೀರೆಲ್ಲಿ?

ಇನ್ನು ಪ್ರತೀ ಬಾರಿ ತಮಿಳುನಾಡು ಸರ್ಕಾರ ನೀರಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗಲೆಲ್ಲಾ ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರ ಕೇಳಿದಷ್ಟು ನೀರು ಬಿಡಲು ಸಾಧ್ಯವಿಲ್ಲ ಎಂದು  ವಾದಿಸುತ್ತದೆಯೇ ಹೋರತು ಕರ್ನಾಟಕದ ಪಾಲಿಗೆ ಬರಬೇಕಿರುವ ನೀರಿನ ಪ್ರಮಾಣ ಹಾಗೂ ಅಗತ್ಯತೆಗಳ ಕುರಿತು ಸಮರ್ಥವಾದ ಮಂಡಿಸುವುದೇ ಇಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಇಂದು ನಡೆಯಲಿರುವ ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರ ತನ್ನ ಪಾಲಿಗೆ ಬರಬೇಕಿರುವ ನೀರಿಗಾಗಿಯೂ ಸಮರ್ಥ ವಾದ ಮಂಡಿಸಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!