ಪರಮೇಶ್ವರ್, ಜಗ್ಗೇಶ್, ಸುದೀಪ್
ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಹಾಗೂ ಸುಪ್ರಿಂಕೋರ್ಟ್ ನ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಜೋರಾಗಿದ್ದು, ಜನತೆಗೆ ಶಾಂತಿ ಕಾಪಾಡುವಂತೆ ಸ್ಯಾಂಡಲ್ ವುಡ್ ನಟರು ಮನವಿ ಮಾಡಿದ್ದಾರೆ.
ದುಷ್ಕರ್ಮಿಗಳು ಮಾಡುವ ಕೆಲಸಕ್ಕೆ ಜನ ಕಿವಿಗೊಡಬಾರದು. ಜನತೆ ಶಾಂತಿ ಕಾಪಾಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ಮನವಿ ಮಾಡಿದ್ದಾರೆ.
ನಟ ಜಗ್ಗೇಶ್ ಅವರು ತಮ್ಮ ಟ್ವೀಟರ್ ಮೂಲಕ ರಾಜ್ಯದ ಜನತೆಗೆ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಇನ್ನು ನಟ ಸುದೀಪ್ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಬರಬೇಕಿದೆ. ಜತೆಗೆ ನ್ಯಾಯವು ಬೇಕು. ಪ್ರಚೋದನಾಕಾರಿ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದಿರಿ ಎಂದು ಮನವಿ ಮಾಡಿದ್ದಾರೆ.
ನೀವು ಇಲ್ಲಿ ಅತಿರೇಕದಿಂದ ಮಾತಾಡಿದರೆ, ತಮಿಳುನಾಡಿನಲ್ಲಿ ಕನ್ನಡಿಗರು ತೊಂದರೆಗೆ ಒಳಗಾಗುತ್ತಾರೆ ಸ್ವಲ್ಪ ಯೋಚಿಸಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics