ಪ್ರಧಾನ ಸುದ್ದಿ

ರಾಮಕುಮಾರ್ ಮರಣೋತ್ತರ ಪರೀಕ್ಷೆ ನಡೆಸದಂತೆ ರಾಯಪೇಟ್ಟ ಆಸ್ಪತ್ರೆಗೆ ಹೈಕೋರ್ಟ್ ಸೂಚನೆ

Guruprasad Narayana
ಚೆನ್ನೈ: ಟೆಕ್ಕಿ ಸ್ವಾತಿ ಕೊಲೆ ಆರೋಪಿ ರಾಮಕುಮಾರ್ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದು, ಇದು ಆತ್ಮಹತ್ಯೆ ಅಲ್ಲ ಎಂದು ರಾಮಕುಮಾರ್ ಕುಟುಂಬ ಆರೋಪಿಸಿರುವ ಹಿನ್ನಲೆಯಲ್ಲಿ ಮುಂದಿನ ಆದೇಶ ನೀಡುವವರೆಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಹೈಕೋರ್ಟ್ ರಾಯಪೇಟ್ಟ ಸರ್ಕಾರಿ ಆಸ್ಪತ್ರೆಗೆ ಸೂಚಿಸಿದೆ. 
ಜೂನ್ 24 ರಂದು ನುಗಂಬಕ್ಕಂ ರೈಲ್ವೆ ನಿಲ್ದಾಣದಲ್ಲಿ ಕೊಲೆಯಾದ 24 ವರ್ಷದ ಸ್ವಾತಿ ಪ್ರಕರಣದಲ್ಲಿ ರಾಮಕುಮಾರ್ ಪ್ರಮುಖ ಮತ್ತು ಒಬ್ಬನೇ ಆರೋಪಿ. ಜುಲೈ 1 ರಂದು ತಿರುನೆಲ್ವೇಲಿಯ ಮೀನಾಕ್ಷಿಪುರಂನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. 
ರಾಮಕುಮಾರ್ ತಂದೆಯ ಪರವಾಗಿ ವಾದ ಮಂಡಿಸಿದ ವಕೀಲ ಶಂಕರಸುಬ್ಬು, ಮುಂದಿನ ವಿಚಾರಣೆ ನಡೆಯುವವರಿಗೆ ಮರಣೋತ್ತರ ಪರೀಕ್ಷೆ ನಡೆಸದಂತೆ ಆದೇಶ ನೀಡಲು ನ್ಯಾಯಾಧೀಶ ಶಿವಜ್ಞಾನಂ ಅವರಲ್ಲಿ ಮನವಿ ಮಾಡಿದ್ದರು. ಹಾಗೆಯೇ ಮರಣೋತ್ತರ ಪರೀಕ್ಷೆ ನಡೆಸುವಾಗ ತಮ್ಮ ಕಕ್ಷಿದಾರ ಬಯಸುವ ವೈದ್ಯರು ಅಲ್ಲಿರುವಂತೆ ಮತ್ತು ಅದನ್ನು ವಿಡಿಯೋ ಮಾಡಲು ಅವಕಾಶ ಕೋರಿದ್ದರು. ಇದರ ವಿಚಾರಣೆಗೆ ಮರು ಅರ್ಜಿ ಸಲ್ಲಿಸುವಂತೆ ಕೋರ್ಟ್ ತಿಳಿಸಿದ್ದು, ಇಂದೇ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. 
SCROLL FOR NEXT