ಪ್ರಧಾನ ಸುದ್ದಿ

ಉರಿ ಉಗ್ರ ದಾಳಿ: ಭಾರತದ ತನಿಖೆಗೆ ಪಾಕಿಸ್ತಾನ ಸರ್ಕಾರ ಸಹಕರಿಸಬೇಕು: ಜಾನ್ ಕೆರ್ರಿ

Srinivasamurthy VN

ವಿಶ್ವಸಂಸ್ಥೆ: 18 ಯೋಧರ ಧಾರುಣ ಸಾವಿಗೆ ಕಾರಣವಾದ ಉರಿ ಉಗ್ರ ದಾಳಿ ಸಂಬಂಧ ಭಾರತ ನಡೆಸುತ್ತಿರುವ ತನಿಖೆಗೆ ಪಾಕಿಸ್ತಾನ ಸಹಕರಿಬೇಕು ಎಂದು ಅಮೆರಿಕ ವಿದೇಶಾಂಗ  ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹಾಗೂ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಪರಸ್ಪರ ಭೇಟಿಯಾಗಿದ್ದು, ಈ ವೇಳೆ ಉರಿ ಉಗ್ರ ದಾಳಿ ಕುರಿತಂತೆ  ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಚರ್ಚೆ ವೇಳೆ ಭಾರತದ ಪರ ನಿಂತ ಜಾನ್ ಕೆರ್ರಿ ಭಾರತದ ತನಿಖೆಗೆ ಸಹಕರಿಸುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಹೇಳಿದ್ದಾರೆ  ಎಂದು ತಿಳಿದುಬಂದಿದೆ.

ಇದೇ ವೇಳೆ ಉರಿ ಉಗ್ರ ದಾಳಿ ಸಂಬಂಧ ಈಗ ವಿಶ್ವಸಂಸ್ಥೆಗೆ ನೀಡಿರುವ ಮಾಹಿತಿಯಲ್ಲದೇ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಭಾರತಕ್ಕೆ ಕೆರ್ರಿ ಸಲಹೆ ನೀಡಿದ್ದಾರೆ. ಪಾಕಿಸ್ತಾನ ಕೂಡ ಉರಿ ಉಗ್ರ ದಾಳಿ ಸಂಬಂಧ ಹೆಚ್ಚಿನ ಸಾಕ್ಷ್ಯಕೇಳುತ್ತಿದೆ ಎನ್ನಲಾಗಿದೆ.

ಇನ್ನು ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಜಾನ್ ಕೆರ್ರಿ ಅವರು, ದಾಳಿ ಹಿಂದಿನ ಕೈವಾಡಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆ ಬಳಿಕ ಮುಂದಿನ ಕ್ರಮ ಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.  "ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಈಗಾಗಲೇ ಭಾರತಕ್ಕೆ ನಮ್ಮ ಪ್ರತಿನಿಧಿಗಳನ್ನು ಹಾಗೂ ತನಿಖಾಧಿಕಾರಿಗಳನ್ನು ರವಾನಿಸಲಾಗಿದ್ದು, ದಾಳಿ ಸಂಬಂಧ  ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. ಅಂತೆಯೇ ಪಾಕಿಸ್ತಾನಕ್ಕೆ ಭಾರತದ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದೇವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

SCROLL FOR NEXT