ಕುಲಭೂಷಣ್ ಜಾಧವ್ 
ಪ್ರಧಾನ ಸುದ್ದಿ

ಜಾಧವ್ ಅವರನ್ನು ತುರ್ತಾಗಿ ನೇಣಿಗೇರಿಸುವುದಿಲ್ಲ ಎಂದ ಪಾಕಿಸ್ತಾನ

ಭಾರತೀಯ ಗೂಢಾಚಾರಿ ಎಂದು ಆರೋಪಿಸಿ ಪಾಕಿಸ್ತಾನಾದ ಮಿಲಿಟರಿ ಕೋರ್ಟ್ ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ನೇಣಿಗೇರಿಸುವುದಿಲ್ಲ ಎಂದು ಭದ್ರತಾ ಸಚಿವ

ಇಸ್ಲಮಾಬಾದ್: ಭಾರತೀಯ ಗೂಢಾಚಾರಿ ಎಂದು ಆರೋಪಿಸಿ ಪಾಕಿಸ್ತಾನಾದ ಮಿಲಿಟರಿ ಕೋರ್ಟ್ ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಕೂಡಲೇ ನೇಣಿಗೇರಿಸುವುದಿಲ್ಲ ಎಂದು ಭದ್ರತಾ ಸಚಿವ ಖವಾಜ ಮೊಹಮದ್ ಆಸೀಫ್ ಹೇಳಿದ್ದಾರೆ. 
ಜಾಧವ್ ಅವರಿಗೆ ನೀಡಿರುವ ಶಿಕ್ಷೆಯ ವಿರುದ್ಧ ಮನವಿ ಮಾಡಿಕೊಳ್ಳಲು ಇನ್ನು ಮೂರು ಅವಕಾಶಗಳಿವೆ ಎಂದು ಡಾನ್ ಆನ್ಲೈನ್ ವರದಿ ಮಾಡಿದೆ. ಜಾಧವ್ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ. 
ಸಚಿವರು ಹೇಳಿರುವಂತೆ ಜಾಧವ್ ಅವರ ವಿಚಾರಣೆ ಮೂರುವರೆ ತಿಂಗಳು ನಡೆಸಲಾಗಿದೆ ಎಂದಿದ್ದಾರೆ. ಜಾಧವ್ ಆರ್ ಎ ಡಬ್ಲ್ಯೂ ಗಾಗಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದ್ದು, ಬಲೂಚಿಸ್ಥಾನದಿಂದ ಮಾರ್ಚ್ ೨೦೧೬ ರಂದು ಬಂಧಿಸಿದ್ದಾಗಿ ಅವರು ತಿಳಿಸಿದ್ದಾರೆ. 
ಭಾರತದ ಪರವಾಗಿ ಗೂಢಾಚಾರಿ ಮಾಡಿರುವುದು, ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಸಾರ್ವಭೌಮತೆಗೆ ಧಕ್ಕೆ ತಂದು ದೇಶದ ಸ್ಥಿರತೆಗೆ ಧಕ್ಕೆ ತಂದ ಆರೋಪವನ್ನು ಜಾಧವ್ ಮೇಲೆ ಹೊರಿಸಲಾಗಿದೆ. 
೬೦ ದಿನಗಳೊಳಳಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮನವಿ ಸಲ್ಲಲಿಸುವ ಅವಕಾಶ ಜಾಧವ್ ಗೆ ಇದ್ದು, ಸೇನಾ ಮುಖ್ಯಸ್ಥ ಮತ್ತು ರಾಷ್ಟ್ರಪತಿಗಳಿಗೆ ಕ್ಷಮಾಪಣೆ ಅರ್ಜಿಯನ್ನು ಕೂಡ ಸಲ್ಲಿಸಬಹುದಾಗಿದೆ ಎಂದು ಆಸಿಫ್ ಹೇಳಿದ್ದಾರೆ. 
ಜಾಧವ್ ಅವರ ವಿರುದ್ಧ ನೀಡಿರುವ ಗಲ್ಲು ಶಿಕ್ಷೆ 'ಪೂರ್ವ ನಿಯೋಜಿತ ಕೊಲೆ' ಎಂದು ಭಾರತ ಆರೋಪಿಸಿರುವುದನ್ನು ತಳ್ಳಿ ಹಾಕಿರುವ ಆಸಿಫ್ ಕಾನೂನನ್ನು ಅನುಸರಿಸಿದ್ದು, ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ. 
ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವವರಿಗೆ, ಅವರು ದೇಶದ ಒಳಗೆ ವಾಸವಿದ್ದರು ಅಥವಾ ಹೊರಗಿದ್ದರು ಯಾವುದೇ ರೀತಿಯ ವಿನಾಯಿತಿ ನೀಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT