ಪ್ರಧಾನ ಸುದ್ದಿ

ಭಾರತದ ಇಂದಿನ ಸ್ಥಿತಿಗೆ ಸರ್ದಾರ್ ಪಟೇಲ್ ಕಾರಣ: ಮೋದಿ

Guruprasad Narayana
ಸೂರತ್: ಸ್ವಾತಂತ್ರ್ಯದ ನಂತರ ಭಾರತದ ಭೂಪಟವನ್ನು ತಿದ್ದಿದ್ದಕ್ಕೆ ಮತ್ತು "ದೇಶದ ಇಂದಿನ ಸ್ಥಿತಿಗೆ" ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಶ್ರೇಯಸ್ಸು ಅರ್ಪಿಸಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತನಾಡಿದ್ದಾರೆ.
"ನಾವಿಂದು ಭಾರತದಲ್ಲಿ ಹೆಮ್ಮೆಯಿಂದ ತಲೆಯೆತ್ತಿ ಬದುಕುತ್ತಿದ್ದರೆ, ಇದು ಅವರಿಂದಲೇ (ಸರ್ದಾರ್ ಪಟೇಲ್)" ಎಂದು ಮೋದಿ ಸೂರತ್ ನಲ್ಲಿ ವಜ್ರ ಉತ್ಪಾದನಾ ಕಾರ್ಖಾನೆಯನ್ನು ಉದ್ಘಾಟಿಸಿ ಹೇಳಿದ್ದಾರೆ. 
ಭಾನುವಾರ ಸಂಜೆ ಇಲ್ಲಿಗೆ ಆಗಮಿಸಿದ ಪ್ರಧಾನಿ, ಭಾರತದ ಆರ್ಥಿಕತೆಯನ್ನು ಬಲಪಡಿಸಿದ್ದಕ್ಕೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೂ ಗೌರವ ಸಲ್ಲಿಸಿದ್ದಾರೆ. 
ಈಗ ಭಾರತದ ಆರ್ಥಿಕತೆ ಸಬಲವಾಗಿರುವುದನ್ನು ನೋಡಿದ್ದರೆ ದೇಸಾಯಿ ಸಂತಸಪಡುತ್ತಿದ್ದರು ಎಂದು ಕೂಡ ಮೋದಿ ಹೇಳಿದ್ದಾರೆ. 
"ವರ್ಷಗಳ ಹಿಂದೆ, ಈ ಪ್ರದೇಶ ನಮಗೆ ಮೊರಾರ್ಜಿ ದೇಸಾಯಿಯವರನ್ನು ನೀಡಿತು. ಅವರು ಭಾರತದ ಆರ್ಥಿಕತೆಯನ್ನು ಬಲಪಡಿಸಲು ತಮ್ಮೆಲ್ಲ ಶ್ರಮವನ್ನು ವಿನಿಯೋಗಿಸಿದ್ದರು. ಇಂದಿನ ಭಾರತದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಅವರ ಆತ್ಮ ಇಂದು ಸಂತಸಪಡುತ್ತಿರಬೇಕು" ಎಂದು ಕೂಡ ಮೋದಿ ಹೇಳಿದ್ದಾರೆ. 
ಉದ್ಘಾಟನೆಗೊಂಡ ವಜ್ರ ಘಟಕದ ಬಗ್ಗೆ ಕೂಡ ಅವರು ಮಾತನಾಡಿದ್ದು, ವಜ್ರ ಪಾಲಿಶ್ ಉದ್ದಿಮೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿತ್ತು. ಈಗ ಕೂಡ ಹವಳ ಮತ್ತು ಒಡವೆ ವಿಭಾಗದಲ್ಲಿ ಮೊದಲನೇ ಸ್ಥಾನಕ್ಕೆ ಭಾರತ ನುಗ್ಗುವ ಸಾಧ್ಯತೆ ಇದೆ ಎಂದಿದ್ದಾರೆ. 
SCROLL FOR NEXT