ಪ್ರಧಾನ ಸುದ್ದಿ

ತರಬೇತಿ ವಿಮಾನ ಪತನ; ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಸೇರಿದಂತೆ ಇಬ್ಬರ ಸಾವು

Guruprasad Narayana
ಭೋಪಾಲ್: ಮಹಾರಾಷ್ಟ್ರದ ಗೋಂಡಿಯಾದ ರಾಷ್ಟ್ರೀಯ ಹಾರಾಟ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನದ ತರಬೇತಿ ವಿಮಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಬುಧವಾರ ಬೆಳಗ್ಗೆ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಬೆಳಗ್ಗೆ ಸುಮಾರು ೧೦:೩೦ ಕ್ಕೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಲಘಾಟ್ ಜಿಲ್ಲೆಯ ಖೈರ್ಲಾಂಜಿ ಪ್ರದೇಶದಲ್ಲಿ ಸಂಭವಿಸಿದೆ. 
ಈ ವಿಮಾನ ಗೋಂಡಿಯಾದ ಬಿರಿಸಿ ವಿಮಾನ ನಿಲ್ದಾಣದಿಂದ ಮೇಲಕ್ಕೆ ಹಾರಿತ್ತು. 
ಮೃತಪಟ್ಟವರಲ್ಲಿ ಒಬ್ಬರು ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಎಂದು ಐಜಿಪಿ (ಬಲಘಾಟ್) ಜಿ ಜನಾರ್ಧನ್ ಹೇಳಿದ್ದಾರೆ. 
ಈ ಪತನಕ್ಕೆ ಮಾವೋವಾದಿಗಳ ಕೈವಾಡವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಹೈ ಟೆನ್ಷನ್ ವೈರ್ ಸಂಪರ್ಕಕ್ಕೆ ಈ ವಿಮಾನ ಬಂದದ್ದರಿಂದ ಪತನವಾಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿಸಿರುವುದಾಗಿ ಐಜಿ ತಿಳಿಸಿದ್ದಾರೆ. 
ದುರ್ಘಟನೆ ಸಂಭವಿಸಿದ ಜಾಗಕ್ಕೆ ಪೊಲೀಸ್ ಸೂಪರಿಂಟೆಂಡೆಂಟ್ (ಬಲಘಾಟ್) ಅಮಿತ್ ಸಿಂಗ್ ಭೇಟಿ ನೀಡಲಿದ್ದಾರೆ. 
SCROLL FOR NEXT