ವಿಪಕ್ಷ ನಾಯಕರಿಲ್ಲದೇ ಲೋಕಪಾಲ್ ನೇಮಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ!
ಭ್ರಷ್ಟಾಚಾರ ತಡೆಗಾಗಿ ಮಾಡಲಾಗುವ ಲೋಕಪಾಲ್ ನೇಮಕಾತಿ ಪ್ರಕ್ರಿಯೆ ವಿಪಕ್ಷ ನಾಯಕ ಇಲ್ಲ ಎಂಬ ಒಂದೇ ಕಾರಣಕ್ಕೆ ವಿಳಂಬಗೊಳಿಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ನವದೆಹಲಿ: ಭ್ರಷ್ಟಾಚಾರ ತಡೆಗಾಗಿ ಮಾಡಲಾಗುವ ಲೋಕಪಾಲ್ ನೇಮಕಾತಿ ಪ್ರಕ್ರಿಯೆ ವಿಪಕ್ಷ ನಾಯಕ ಇಲ್ಲ ಎಂಬ ಒಂದೇ ಕಾರಣಕ್ಕೆ ವಿಳಂಬಗೊಳಿಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ವಿಪಕ್ಷ ನಾಯಕನಿಲ್ಲ ಎಂಬ ಒಂದೇ ಕಾರಣದಿಂದ ಲೋಕಪಾಲ್ ನೇಮಕ ವಿಳಂಬ ಮಾಡುತ್ತಿರುವುದು ಸರಿಯಲ್ಲ, ವಿಪಕ್ಷ ನಾಯಕನಿಲ್ಲದೆಯೂ ಲೋಕಪಾಲ ನೇಮಕಾತಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಮುಖ್ಯ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಗಣನೆಗೆ ತೆಗೆದುಕೊಳ್ಳದೆಯೂ ಇದೀಗ ಲೋಕಪಾಲರನ್ನು ಕೇಂದ್ರ ಸರ್ಕಾರ ನೇಮಿಸಬಹುದು. ಪ್ರತಿಪಕ್ಷ ನಾಯಕರ ಭಾಗಿತ್ವವಿಲ್ಲದೇ ಲೋಕಪಾಲ್ ರನ್ನು ನೇಮಿಸಬಹುದು. ಪ್ರತಿಪಕ್ಷ ನಾಯಕನಿಲ್ಲ ಹೀಗಾಗಿ ನೇಮಕಾತಿ ವಿಳಂಬ ಎಂಬ ಕೇಂದ್ರ ಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ . ಲೋಕಪಾಲ್ ನೇಮಕಕ್ಕೆ ಈಗಾಗಲೇ ಮೂರು ವರ್ಷಗಳು ವಿಳಂಬವಾಗಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.