ಅಪಘಾತಕ್ಕೊಳಗಾದ ಕಾರು 
ಪ್ರಧಾನ ಸುದ್ದಿ

ಜಯಾ ಎಸ್ಟೇಟ್‌ ಗಾರ್ಡ್‌ ಕೊಲೆ ಪ್ರಕರಣ: ಅಪಘಾತದಲ್ಲಿ ಶಂಕಿತ ಆರೋಪಿ ಸಾವು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ನೀಲಗಿರಿ ಜಿಲ್ಲೆಯ ಎಸ್ಟೇಟ್‌ ಸೆಕ್ಯುರಿಟಿ ಗಾರ್ಡ್‌ ಕೊಲೆ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ನೀಲಗಿರಿ ಜಿಲ್ಲೆಯ ಎಸ್ಟೇಟ್‌ ಸೆಕ್ಯುರಿಟಿ ಗಾರ್ಡ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಣಗರಾಜ್ ಅವರು ಶನಿವಾರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 
ಇಂದು ನೆರೆಯ ರಾಜ್ಯ ಕೇರಳದ ತ್ರಿಸೂರ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಣಗರಾಜ್, ಆತನ ಪತ್ನಿ ವಿನುಪ್ರಿಯಾ ಹಾಗೂ ಪುತ್ರಿ ನೀತು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಆರೋಪಿ ಹಾಗೂ ಕಣಗರಾಜ್ ಆಪ್ತ ಸಯನ್ ಅಲಿಯಾಸ್ ಶ್ಯಾಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.
2012ರವರೆಗೆ ಜಯಲಲಿತಾ ಅವರ ಕಾರು ಚಾಲಕನಾಗಿದ್ದ ಕಣಗರಾಜ್, ಇತ್ತೀಚಿಗೆ ಜಯಲಲಿತಾ ಅವರ ಕೊಡನಾಡು ಟೀ ಎಸ್ಟೇಟ್  ಸೆಕ್ಯುರಿಟಿ ಗಾರ್ಡ್‌ ಓಂ ಬಹದ್ದೂರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. 
ಜಯಲಲಿತಾ ಅವರ ಕೊಡನಾಡಿನಲ್ಲಿರುವ ಎಸ್ಟೇಟ್‌ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್‌ ಬಂಗಲೆಯಲ್ಲಿ ಜಯಾ ಆಗೀಗ ಬಂದು ಇರುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!

'Boss ಯಾರು ಬಾಸ್ ಅಂತ ನೆತನ್ಯಾಹುಗೆ ಚೆನ್ನಾಗಿ ಗೊತ್ತಿದೆ'; ಇಸ್ರೇಲ್ ಪ್ರಧಾನಿಗೆ ಟ್ರಂಪ್ ಖಡಕ್ ಸಂದೇಶ, ಆಪ್ತರಿಂದಲೂ 'ಬಿಬಿ' ವಿರುದ್ಧ ಅಸಮಾಧಾನ..!

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ