ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಉಗ್ರ ಪಟ್ಟಿಗೆ ಅಜರ್ ಮಸೂದ್: ವಿಶ್ವಸಂಸ್ಥೆ ಮೊರೆ ಹೋದ ಅಮೆರಿಕ!

ಮಹತ್ವದ ಬೆಳವಣಿಗೆಯಲ್ಲಿ ಸಂಸತ್ ಭವನದ ಮೇಲಿನ ದಾಳಿ ಕೋರ ಹಾಗೂ ಪಠಾಣ್ ಕೋಟ್ ದಾಳಿ ರೂವಾರಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮೂರು ಪ್ರಮುಖ ರಾಷ್ಟ್ರಗಳು ಬೆಂಬಲ ನೀಡಿವೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸಂಸತ್ ಭವನದ ಮೇಲಿನ ದಾಳಿ ಕೋರ ಹಾಗೂ ಪಠಾಣ್ ಕೋಟ್ ದಾಳಿ ರೂವಾರಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ  ಮೂರು ಪ್ರಮುಖ ರಾಷ್ಟ್ರಗಳು ಬೆಂಬಲ ನೀಡಿವೆ.

ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸಾಥ್ ನೀಡಿದ್ದು, ಮಸೂದ್ ಅಜರ್ ನನ್ನು ಉಗ್ರ ಪಟ್ಟಿಗೆ ಸೇರಿಸುವ ಮನವಿಗೆ ಈ  ಮೂರು ದೇಶಗಳು ಅನುಮೋದನೆ ನೀಡಿವೆ. ಅಲ್ಲದೆ ಈ ಬಗ್ಗೆ ವಿಶ್ವಸಂಸ್ಥೆಯ ಮೆಟ್ಟಿಲೇರಲು ಅಮೆರಿಕ ಮುಂದಾಗಿದ್ದು, ಮುಂದಿನ ವಿಶ್ವಸಂಸ್ಥೆ ಕಲಾಪದಲ್ಲಿ ಭಾರತದ ಮನವಿಗೆ ಅಮೆರಿಕ ಧನಿಯಾಗಲಿದೆ.

ಆದರೆ ಕಳೆದ ಬಾರಿ ಭಾರತದ ಇದೇ ಪ್ರಯತ್ನಕ್ಕೆ ತಾಂತ್ರಿಕ ನೆಪವೊಡ್ಡಿ ಅಡ್ಡಿಯಾಗಿದ್ದ ಚೀನಾ ಈ ಬಾರಿಯೂ ಭಾರತಕ್ಕೆ ಅಡ್ಡಿಯಾಗಿದ್ದು, ಜಾಗತಿಕ ಘೋಷಿತ ಭಯೋತ್ಪಾದಕರ ಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸಲು  ಸೂಕ್ತವಾದ ಅಂಶಗಳನ್ನು ಭಾರತ ನೀಡಿಲ್ಲ ಎಂದು ಮತ್ತದೇ ತನ್ನ ಮೊಂಡುವಾದವನ್ನು ಮಂಡಿಸಿದೆ. ಈ ಬಗ್ಗೆ ಸ್ವತಃ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ನಡೆದ ವಿವಿಧ ಉಗ್ರ ದಾಳಿಗಳಲ್ಲಿ ಮಸೂದ್ ಅಜರ್ ನೇರ  ಕೈವಾಡವಿದ್ದು, ಈ ಬಗ್ಗೆ ಸಾತಷ್ಟು ಪುರಾವೆಗಳನ್ನು ನೀಡಲಾಗಿದೆ. ಹೀಗಿದ್ದೂ ಚೀನಾ ಭಾರತದ ಪ್ರಯತ್ನಕ್ಕೆ ಪದೇ ಪದೇ ತಡೆಯಾಗುತ್ತಿದೆ. ಈ ಮಹತ್ವದ ಬೆಳವಣಿಗೆ ಕುರಿತಂತೆ ಚೀನಾ ಸರ್ಕಾರದೊಂದಿಗೆ ಚರ್ಚೆ ನಡೆಸುವುದಾಗಿ  ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರ ಮಸೂದ್ ನನ್ನು ಜಾಗತಿಕ ಘೋಷಿತ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಯಶ ಸಿಕ್ಕಿದ್ದೇ ಆದರೆ ಉಗ್ರ ಮಸೂದ್ ಅಜರ್ ನನ್ನು ಗೃಹ ಬಂಧನದಲ್ಲಿರಿಸಿದಂತಾಗುತ್ತದೆ. ಆತನ ವಿದೇಶ ಪ್ರಯಾಣ  ರದ್ದಾಗಲಿದ್ದು, ಅಂತಾರಾಷ್ಟ್ರೀಯ ತನಿಖಾ ದಳಗಳು ಆತನ ಕಾರ್ಯಚಟುವಟಿಕೆಗಳ ಮೇಲಿ ನಿರಂತರ ಕಣ್ಣು ಹಾಯಿಸುತ್ತಾರೆ. ಇಷ್ಟು ಮಾತ್ರವಲ್ಲದೇ ಉಗ್ರ ಮಸೂದ್ ನನ್ನು ಇಟ್ಟುಕೊಂಡಿರುವ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತೀವ್ರ  ಮುಜುಗರಕ್ಕೀಡಾಗುತ್ತದೆ. ಇದೇ ಕಾರಣಕ್ಕೆ ಪಾಕ್ ಸರ್ಕಾರ ಚೀನಾವನ್ನು ಮುಂದಿಟ್ಟುಕೊಂಡು ಭಾರತದ ಪ್ರಯತ್ನಕ್ಕೆ ತಡೆ ಒಡ್ಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್