ರಾಹುಲ್ ಗಾಂಧಿ-ಅಖಿಲೇಶ್ ಯಾದವ್
ಲಖನೌ: ಉತ್ತರಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಜರುಗಬೇಕಿದ್ದ ಬಹುನಿರೀಕ್ಷಿತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜಂಟಿ ರೋಡ್ ಶೋ ರದ್ದಾಗಿದೆ. ದೀನರ ಸಂತ ಗುರು ರವಿದಾಸ್ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಬದಲಾಗಿದೆ. ವಿಧಾನಸಭಾ ಚುನಾವಣೆಗೆ ವಾರಣಾಸಿಯಲ್ಲಿ ಇಂದು ಈ ಇಬ್ಬರೂ ನಾಯಕರು ಒಟ್ಟಿಗೆ ಪ್ರಚಾರ ನಡೆಸಬೇಕಿತ್ತು.
ಗುರುವಾರ ರಾತ್ರಿ ದೂರವಾಣಿ ಕರೆ ಮೂಲಕ ರಾಹುಲ್ ಗಾಂಧಿ ಅವರ ನವದೆಹಲಿ ಕಚೇರಿಯಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಈ ವಿಷಯವನ್ನು ತಿಲಿಸಲಾಗಿದೆ.
ಈಗ ಈ ರೋಡ ಶೋಗಾಗಿ ಹೊಸ ದಿನಾಂಕವನ್ನು ನಿಗದಿಪಡಿಸಲು ಚರ್ಚಿಸಲಾಗುತ್ತಿದೆ.
ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡ ನಂತರ ಈ ಎರಡೂ ನಾಯಕರು ಲಖನೌ, ಕಾನ್ಪುರ ಮತ್ತು ಆಗ್ರಾಗಳಲ್ಲಿ ಭಾರಿ ರೋಡ್ ಶೋ ನಡೆಸಿದ್ದರು.