ಶಶಿಕಲಾ 
ಪ್ರಧಾನ ಸುದ್ದಿ

ಶಾಸಕರ ಅಪಹರಣ ಆರೋಪ: ಶಶಿಕಲಾ, ಪಳನಿಸ್ವಾಮಿ ವಿರುದ್ಧ ಎಫ್ಐಆರ್ ದಾಖಲು

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ...

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಕೆ ಪಳನಿಸ್ವಾಮಿ ಅವರ ವಿರುದ್ಧ ತಮಿಳುನಾಡು ಪೊಲೀಸರು ಶಾಸಕರ ಅಪಹರಣ ಆರೋಪದ ಮೇಲೆ ಬುಧವಾರ ಕೇಸ್ ದಾಖಲಿಸಿದ್ದಾರೆ.
ಎಐಎಡಿಎಂಕೆಯ ಮಧುರೈ ಕ್ಷೇತ್ರದ ಶಾಸಕ ಎಸ್ ಶರವಣನ್ ಅವರು ಇಂದು ಬೆಳಗ್ಗೆ ಕೂವತ್ತೂರು ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದು, ಈ ಸಂಬಂದ ಶಶಿಕಲಾ ಮತ್ತು ಎಡಪಾಡಿ ಕೆ ಪಳನಿಸ್ವಾಮಿ ವಿರುದ್ಧ ಎಫ್ ಐಆರ್  ದಾಖಲಿಸಲಾಗಿದೆ.
ದೂರಿನಲ್ಲಿ, ವಿಕೆ ಶಶಿಕಲಾ ಮತ್ತು ಎಡಪಾಡಿ ಪಳನಿ ಸ್ವಾಮಿ ಅವರು ತಮ್ಮ ಬೆಂಬಲಿಗರ ನೆರವಿನಿಂದ ಬಲವಂತವಾಗಿ ನನ್ನನ್ನು ಕಾಂಚಿಪುರಂನ ಕೊವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ಎಳೆದೊಯ್ದಿದ್ದರು. ಅಲ್ಲಿ ತಮ್ಮನ್ನು  ಬಲವಂತವಾಗಿ ಕೂಡಿ ಹಾಕಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದಂತೆ ಗೂಂಡಾಗಳ ಮೂಲಕ ಬೆದರಿಕೆ ಹಾಕಲಾಗಿತ್ತು. ರೆಸಾರ್ಟ್ ಗೆ ತೆರಳುತ್ತಿದ್ದಂತೆಯೇ ನಮ್ಮ ಮೊಬೈಲ್ ಗಳನ್ನು ಕಸಿಯಲಾಗಿತ್ತು. ಅಲ್ಲಿ ಏನಾಗುತ್ತಿದೆ ಎಂಬುದೇ  ಕ್ಷಣಕಾಲ ತಿಳಿಯಲಿಲ್ಲ. ಬಳಿಕ ತಮ್ಮನ್ನು ಬಲವಂತವಾಗಿ ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲಾಗಿದೆ ಎಂಬುದು ತಿಳಿಯಿತು. ಇದಾದ ಬಳಿಕ ಎಲ್ಲರ ಗಮನ ಬೇರೆಡೆ ಇದ್ದಾಗ ನಾನು ಟಿಶರ್ಟ್ ಮತ್ತು ಶಾರ್ಟ್ಸ್ ನಲ್ಲೇ ರೆಸಾರ್ಟ್ ಗೋಡೆ  ಹಾರಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮುಖ್ಯಮಂತ್ರಿಗಳ ಮನೆಗೆ ದೌಡಾಯಿಸಿದೆ ಎಂದು ಶರವಣನ್ ಆರೋಪಿಸಿದ್ದಾರೆ.
ಶಾಸಕ ಶರವಣನ್ ನೀಡಿರುವ ದೂರಿನ ಅನ್ವಯ ಇದೀಗ ಕೊವತ್ತೂರು ಠಾಣೆ ಪೊಲೀಸರು ವಿಕೆ ಶಶಿಕಲಾ ಮತ್ತು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 342, 343, 353, 365,  506/1ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ?, ಕೊಲಂಬೋದಲ್ಲಿ ಶೇ.94ರಷ್ಟು ವರ್ಷಧಾರೆ ಸಾಧ್ಯತೆ!

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ: 6 ದಿನಗಳ ನಂತರ ಶವ ಪತ್ತೆ

ಬೆಂಗಳೂರು-ನೆಲಮಂಗಲ ಜಿಂದಾಲ್ ಫ್ಲೈ ಓವರ್ ಬಳಿ ಭೀಕರ ಅಪಘಾತ: KSRTC ಬಸ್​​ಗೆ ಕಾರು ಡಿಕ್ಕಿ; ಐವರು ಯುವಕರು ಸಾವು

ಮದುವೆಗೆ ತೆರಳಿದ್ದ ಮಹಿಳೆ ನಿಗೂಢ ಕಣ್ಮರೆ ಕೇಸ್ ಗೆ ಬಿಗ್ ಟ್ವಿಸ್ಟ್: ಕುಣಿಗಲ್ ನಲ್ಲಿ ಲವರ್ ಮನೆಯಲ್ಲಿ ಪತ್ತೆ!

ನುಡಿದಂತೆ ನಡೆಯುವುದು ಕಾಂಗ್ರೆಸ್ ಮಾತ್ರ, ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ತುಟಿ ಪಿಟಿಕ್ ಅನ್ನುತ್ತಿಲ್ಲ: ಸಿಎಂ ಸಿದ್ದರಾಮಯ್ಯ

SCROLL FOR NEXT