ಪನ್ನೀರ್ ಸೆಲ್ವಂ 
ಪ್ರಧಾನ ಸುದ್ದಿ

ಅಸಂವಿಧಾನಿಕ ವಿಶ್ವಾಸ ಮತಯಾಚನೆ, ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆ: ಪನ್ನೀರ್ ಸೆಲ್ವಂ

ಸ್ಪೀಕರ್ ಧನಪಾಲ್ ಅವರು ಅವಿಸಂವಿಧಾನಿಕವಾಗಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸಿದ್ದಾರೆ, ನಮ್ಮ ಬೇಡಿಕೆಯಂತೆ ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆ ಇರುತ್ತಿತ್ತು ಎಂದು ಪನ್ನೀರ್ ಸೆಲ್ವಂ ಅವರು ಹೇಳಿದ್ದಾರೆ.

ಚೆನ್ನೈ: ಸ್ಪೀಕರ್ ಧನಪಾಲ್ ಅವರು ಅವಿಸಂವಿಧಾನಿಕವಾಗಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸಿದ್ದಾರೆ, ನಮ್ಮ ಬೇಡಿಕೆಯಂತೆ ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆ ಇರುತ್ತಿತ್ತು ಎಂದು ಪನ್ನೀರ್ ಸೆಲ್ವಂ ಅವರು  ಹೇಳಿದ್ದಾರೆ.

ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಸಿಎಂ ಪಳನಿ ಸ್ವಾಮಿ ವಿಶ್ವಾಸ ಮತಯಾಚನೆ ಪ್ರಕ್ರಿಯೆ ವಿಪಕ್ಷಗಳ ಭಾರೀ ಕೋಲಾಹಲದ ನಡುವೆಯೇ ಮುಕ್ತಾಯ ಕಂಡಿದ್ದು, ಪಳನಿ ಸ್ವಾಮಿ ಪರವಾಗಿ 122 ಮತಗಳು ಮತ್ತು  ವಿರುದ್ಧವಾಗಿ 11 ಮತಗಳು ಮಾತ್ರ ಚಲಾವಣೆಯಾಗಿದೆ. ಆ ಮೂಲಕ ವಿಶ್ವಾಸ ಮತದಲ್ಲಿ ಪಳನಿ ಸ್ವಾಮಿ ಮತ್ತು ಶಶಿಕಲಾ ಬಣ ಗೆದ್ದಿದ್ದು. ಪನ್ನೀರ್ ಸೆಲ್ವಂ ಬಣಕ್ಕೆ ಹಿನ್ನಡೆಯಾಗಿದೆ.

ವಿಶ್ವಾಸ ಮತ ಯಾಚನೆ ಬಳಿಕ ಹೊರಗೆ ಬಂದ ಪನ್ನೀರ್ ಸೆಲ್ವಂ ಬಣ ಸ್ಪೀಕರ್ ಧನಪಾಲ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪನ್ನೀರ್ ಸೆಲ್ವಂ ಅವರು, ಅಸಂವಿಧಾನಿಕ ವಿಶ್ವಾಸ  ಮತಯಾಚನೆಯಾಗಿದ್ದು, ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಪ್ರಸ್ತುತ ಅಧರ್ಮ ಮುನ್ನಡೆ ಸಾಧಿಸಬಹುದು ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಕ್ಕೇ ಸಿಗುತ್ತದೆ. ಅಸಂವಿಧಾನಿಕ ನಡೆ ಕುರಿತಂತೆ  ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.

ವಿಧಾನಸಭೆ ಹೊರಗೆ ಡಿಎಂಕೆ ಭಾರಿ ಪ್ರತಿಭಟನೆ
ಇದೇ ವೇಳೆ ಮಾರ್ಷಲ್ ಗಳಿಂದ ಹೊರ ಹಾಕಲ್ಪಟ್ಟ ಡಿಎಂಕೆ ಸದಸ್ಯರು ವಿಧಾನಸಭೆ ಹೊರಗೆ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಎಂಕೆ ಸ್ಟಾಲಿನ್ ಸೇರಿದಂತೆ ಡಿಎಂಕೆ ಎಲ್ಲ ಶಾಸಕರು ತಮಿಳುನಾಡು ಸರ್ಕಾರ ಹಾಗೂ ಸ್ಪೀಕರ್  ಧನಪಾಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ