ಆನಂದ್: ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಸ್ವತಂತ್ರ ಪುರಸಭಾ ಸದಸ್ಯ ಪ್ರಜ್ಞೆಶ್ ಪಟೇಲ್ ಅವರಿಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗುರುತು ಸಿಕ್ಕದ ಇಬ್ಬರು ದಾಳಿಕೋರರು ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಒಂದು ಬುಲೆಟ್ ಪಟೇಲ್ ಅವರ ಕತ್ತನ್ನು ಹೊಕ್ಕಿದೆ. ಈ ದಾಳಿಗೆ ಕಾರಣ ಕೂಡ ತಿಳಿದಿಲ್ಲ.
ಅವರನ್ನು ಕೂಡಲೇ ವೋಡೋದರಾ ಸ್ಟರ್ಲಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.