ಪ್ರಧಾನ ಸುದ್ದಿ

ಕೃಷ್ಣಮೃಗ ಬೇಟೆ ಪ್ರಕರಣ; ಜನವರಿ ೨೫ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಲ್ಮಾನ್ ಗೆ ಸೂಚನೆ

Guruprasad Narayana
ಜೋಧ್ಪುರ: ೧೯೯೮ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿ ಸಲ್ಮಾನ್ ಖಾನ್ ಹಾಗು ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಮತ್ತು ಟಬು ಇವರುಗಳಿಗೆ ಜನವರಿ ೨೫ ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸಿದೆ. 
ನ್ಯಾಯಾಲಯದಲ್ಲಿ ಎಲ್ಲ ಸಾಕ್ಷ್ಯಗಳನ್ನು ವಿಚಾರಣೆ ನಡೆಸಿದ ಮೇಲೆ ಮುಖ್ಯ ಜುಡಿಷಿಯಲ್ ಮೆಜೆಸ್ಟ್ರೇಟ್ ದಲ್ಪತ್ ಸಿಂಗ್ ಈ ನಿರ್ದೇಶನ ನೀಡಿದ್ದಾರೆ. ಅನಧಿಕೃತ ಶಸ್ತ್ರಾಸ್ತ್ರಗಳನ್ನು ಬಳಸಿ, ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಕಂಕಣಿ ಗ್ರಾಮದಲ್ಲಿ ಬೇಟೆಯಾಡಿದ್ದಕ್ಕೆ ಸಲ್ಮಾನ್ ಖಾನ್ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 
ಅಕ್ಟೊಬರ್ ೧, ೧೯೯೮ ರಂದು 'ಹಮ್ ಸಾಥ್ ಸಾಥ್ ಹೈ' ಸಿನೆಮಾ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ, ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ಸಹ ಆರೋಪಿಗಳು. 
ಶಸ್ತ್ರಾಸ್ತ್ರ ಕಾಯ್ದೆಯಡಿ ಸಲ್ಮಾನ್ ಖಾನ್ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಜನವರಿ ೧೮ ರಂದು ತೀರ್ಪು ನೀಡಲಿದ್ದು, ಅಂದು ಸಲ್ಮಾನ್ ಖಾನ್ ಅವರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. 
SCROLL FOR NEXT