ಪ್ರಧಾನ ಸುದ್ದಿ

ಕೃಷ್ಣಮೃಗ ಬೇಟೆ ಪ್ರಕರಣ; ಸಲ್ಮಾನ್, ಸಹ ಆರೋಪಿಗಳಿಗೆ ಕೋರ್ಟ್ ಹಾಜರಾತಿಯಿಂದ ವಿನಾಯಿತಿ

Guruprasad Narayana
ಜೋದ್ಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ, ಸಲ್ಮಾನ್ ಖಾನ್ ಮತ್ತು ಇತರ ಸಹ ಆರೋಪಿಗಳಿಗೆ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿರುವ ಜೋದ್ಪುರ ಕೋರ್ಟ್, ಪ್ರಕರಣವನ್ನು ಜನವರಿ ೨೭ ಕ್ಕೆ ಮುಂದೂಡಿದೆ. 
೧೯೯೮ ರಲ್ಲಿ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಹೇಳಿಕೆಗಳನ್ನು ದಾಖಲು ಮಾಡಲು ಮುಖ್ಯ ಆರೋಪಿ ಸಲ್ಮಾನ್ ಖಾನ್ ಮತ್ತು ಸಹ ಆರೋಪಿಗಳಾದ ಸೈಫ್ ಅಲಿ ಖಾನ್, ಟಬು, ನೀಲಂ ಮತ್ತು ಸೋನಾಲಿ ಬೇಂದ್ರೆ ಅವರಿಗೆ ಮುಖ್ಯ ಜುಡಿಷಿಯಲ್ ಮೆಜೆಸ್ಟ್ರೇಟ್ ದಲ್ಪತ್ ರಾಜಪುರೋಹಿತ್ ಸಿಂಗ್ ಈ ಹಿಂದೆ ಆದೇಶಿಸಿದ್ದರು. 
"ಆರೋಪಿಗಳು ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ಕೋರಿ ನಾವು ಜಂಟಿ ಅರ್ಜಿಯನ್ನು ಹಾಕಿದ್ದೆವು ಮತ್ತು ನ್ಯಾಯಾಲಯ ಒಪ್ಪಿಕೊಂಡಿತು" ಎಂದು ವಕೀಲ ಕೆ ಕೆ ವ್ಯಾಸ್ ಹೇಳಿದ್ದಾರೆ. 
ಗಣರಾಜ್ಯೋತ್ಸ ದಿನಾಚರಣೆಗಳಿಗಾಗಿ ಮುಖ್ಯಮಂತ್ರಿ ಮತ್ತು ಗವರ್ನರ್ ನಗರಕ್ಕೆ ಆಗಮಿಸುತ್ತಿರುವುದರಿಂದ ನಟರಿಗೆ ಸಮರ್ಥ ಭದ್ರತೆ ನೀಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. 
SCROLL FOR NEXT