ಪ್ರಧಾನ ಸುದ್ದಿ

ರೈಲು ಸ್ಫೋಟ ಪ್ರಕರಣ ತನಿಖೆ ಎನ್ಐಎಗೆ, ಸೈಫುಲ್ಲಾ ತಂದೆ ಬಗ್ಗೆ ರಾಜನಾಥ್ ಸಿಂಗ್ ಮೆಚ್ಚುಗೆ

Lingaraj Badiger
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಲಖನೌ ಎನ್ ಕೌಂಟರ್ ಸೇರಿದಂತೆ ಮಧ್ಯ ಪ್ರದೇಶ ರೈಲು ಸ್ಫೋಟ ಪ್ರಕರಣದ ತನಿಖೆ ನಡೆಸಲಿದೆ ಎಂದು ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ರೈಲು ಸ್ಫೋಟದ ಬಗ್ಗೆ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಬಗ್ಗೆ ಇಂದು ಲೋಕಸಭೆಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್ ಅವರು, ಉತ್ತರ ಪ್ರದೇಶ ಪೊಲೀಸರು ನಿನ್ನೆ ಎನ್ ಕೌಂಟರ್ ನಲ್ಲಿ ಶಂಕಿತ ಉಗ್ರ ಮೊಹಮ್ಮದ್ ಸೈಫುಲ್ಲಾನನ್ನು ಹತ್ಯೆ ಮಾಡಿದ್ದು, ಇತರೆ ಆರು ಶಂಕಿತರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪುತ್ರ ಸೈಫುಲ್ಲಾ ಮೃತದೇಹ ಪಡೆಯಲು ನಿರಾಕರಿಸಿದ ತಂದೆ ಸರ್ತಾಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜನಾಥ್ ಸಿಂಗ್, ಆತನ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.
ಭಯೋತ್ಪಾದಕ ನನ್ನ ಮಗನಾಗಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಹುಟ್ಟಿದ್ದು ಇದೇ ನಾಡಲ್ಲಿ, ನಾನು ಹುಟ್ಟಿದ್ದು ಇಲ್ಲೆ, ನಾವು ಭಾರತೀಯರು. ಇಲ್ಲೆ ಹುಟ್ಟಿ ಬೆಳೆದು ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಆತನ ಭಯೋತ್ಪಾದನೆಯ ಕೃತ್ಯಗಳು ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಆತನ ಮೃತದೇಹ ಸ್ವೀಕರಿಸಲ್ಲ ಎಂದು ನಿನ್ನೆ ಸರ್ತಾಜ್ ಹೇಳಿದ್ದರು.
SCROLL FOR NEXT