ವಿವಾದಾತ್ಮಕ ಕುಂದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜ ಭೈಯ್ಯಾ
ರಾಯ್ ಬರೇಲಿ: ರಸ್ತೆ ಅಪಘಾತದಲ್ಲಿ ಪ್ರಕರಣವೊಂದರ ಪ್ರಮುಖ ಸಾಕ್ಷಿ ಸಾವನ್ನಪ್ಪಿರುವುದರಿಂದ, ಈ ಸಂಬಂಧದಲ್ಲಿ ವಿವಾದಾತ್ಮಕ ಕುಂದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜ ಭೈಯ್ಯಾ ಮತ್ತು ಇತರ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಕೊಳ್ಳಲಾಗಿದೆ.
ಪ್ರತಾಪ್ಘರ್ ಜಿಲ್ಲೆಯ ಹತಿಗಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ೨೫ ವರ್ಷದ ಯೋಗೇಂದ್ರ ಯಾದವ್ ಅವರ ದ್ವಿಚಕ್ರ ವಾಹನಕ್ಕೆ ಕಳೆದ ರಾತ್ರಿ ಟ್ರಕ್ ಒಂದು ಗುದ್ದಿದ್ದರಿಂದ ಅರ್ಕಾ ಗ್ರಾಮದ ಬಳಿ ಅವರು ಮೃತಪಟ್ಟಿದ್ದಾರೆ ಎಂದು ಸೂಪರಿಂಟೆಂಡೆಂಟ್ ಪೊಲೀಸ್ ಅಬ್ದುಲ್ ಹಮೀದ್ ಹೇಳಿದ್ದಾರೆ.
ಮೃತಪಟ್ಟವರ ಸಂಬಂಧಿ ಇಂದು ಸ್ವತಂತ್ರ ಶಾಸಕ ರಾಜ ಭೈಯ್ಯಾ, ಅವರ ದಾಯಾದಿ ಅಕ್ಷಯ್ ಪ್ರತಾಪ್ ಸಿಂಗ್ (ವಿಧಾನ ಪರಿಷತ್ ಸದಸ್ಯ), ಅವರ ವ್ಯವಸ್ಥಾಪಕ ನಿರ್ದೇಶಕ ನಾನ್ಹೇ ಸಿಂಗ್, ಚಾಲಕ ಸಂಜಯ್ ಪ್ರತಾಪ್ ಸಿಂಗ್ ಮತ್ತು ಟ್ರಕ್ ಚಾಲಕನ ವಿರುದ್ಧ, 'ಯುವಕನನ್ನ ಕೊಲೆ ಮಾಡಲಾಗಿದೆ' ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
೨೦೧೩ ರ ಸರ್ಕಲ್ ಅಧಿಕಾರಿ ಹಕ್ ಅವರ ಸಾವಿನ ಪ್ರಕರಣದಲ್ಲಿ ಯೋಗೇಂದ್ರ ಯಾದವ್ ಪ್ರಮುಖ ಸಾಕ್ಸ್ಯ. ಆ ವರ್ಷ ಎರಡು ಗುಂಪುಗಳ ನಡುವೆ ಹಿಂಸೆ ತಡೆಯಲು ಹೋಗಿದ್ದ ಹಕ್ ಅವರನ್ನು ಹೊಡೆದು ಸಾಯಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.