ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟ: ರಘು ರೈಗೆ ಜೀವಮಾನ ಸಾಧನೆ ಪ್ರಶಸ್ತಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ: 6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965ರಲ್ಲಿ ತಮ್ಮ ವೃತ್ತಿಪರ ಛಾಯಾಗ್ರಹಣ ಆರಂಭಿಸಿದ ರಘು ರೈ ಅವರು, 1972ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತೆಯೇ ಛಾಯಾಗ್ರಹಣ ಕಲೆಯಲ್ಲಿ ಅಗಾಧ ಅನುಭವ ಹೊಂದಿರುವ ರಘುರೈ ಅವರು, ಸುಮಾರು 18  ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು 1992ರಲ್ಲಿ ಅಮೆರಿಕದ ಪ್ರತಿಷ್ಠಿತ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೂ ರಘುರೈ ಭಾಜನರಾಗಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈ ಬಗ್ಗೆ  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನಾರಾದ ರಘುರೈ ಅವರಿಗೆ ಶುಭಾಷಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಜಾಗೃತಿ ಮೂಡಿಸಬಹುದಾಗಿದ್ದು, ಛಾಯಾ ಗ್ರಹಣ ಉತ್ತಮ ಆಡಳಿತ ಪ್ರಸರಣದ ಮಾರ್ಗ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಳಿದಂತೆ ಪ್ರಶಸ್ತಿಗೆ ಭಾಜನರಾದ ಪ್ರಮುಖ ಛಾಯಾಗ್ರಾಹಕ ಹೆಸರು ಇಂತಿದೆ.
ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ-ರವೀಂದರ್ ಕುಮಾರ್
ವರ್ಷದ ವತ್ತಿಪರ ಛಾಯಾಗ್ರಾಹಕ ಪ್ರಶಸ್ತಿ-ಕೆಕೆ ಮುಸ್ತಾಫಾ
ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಒಪಿ ಸೋನಿ
ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಜಿ ನಾಗಶ್ರೀನಿವಾಸು
ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ದಿಪಾಯನ್ ಬಿಹಾರ
ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಚ ನಾರಾಯಣ ರಾವ್
ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಅತುಲ್ ಚೌಬೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT