ಪ್ರಧಾನ ಸುದ್ದಿ

ಅಮೆರಿಕಾದಲ್ಲಿ ಅಜಿತ್ ದೋವಲ್; ಹಿರಿಯ ಅಧಿಕಾರಿಗಳೊಂದಿಗೆ ಭೇಟಿ

Guruprasad Narayana
ವಾಷಿಂಗ್ಟನ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅಮೆರಿಕ ಭದ್ರತಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ನಡೆಸಿದ ಸಭೆಯಲ್ಲಿ, ಎರಡು ದೇಶಗಳ ಶಕ್ತಿಯುತ ಭದ್ರತಾ ಸಂಬಂಧಗಳನ್ನು ಮುಂದುವೆರೆಸಿರುವುದರ ಚರ್ಚೆಯಲ್ಲಿ ನಿರ್ಣಯಿಸಲಾಗಿದೆ. 
ಪೆಂಟಗನ್ ವಕ್ತಾರ ಕ್ಯಾಪ್ಟನ್ ಜೆಫ್ ಡೇವಿಸ್ ಓದಿರುವ ಹೇಳಿಕೆಯಲ್ಲಿ, ಗುರುವಾರ ಪೆಂಟಗನ್ ನಲ್ಲಿ ಚರ್ಚೆ ನಡೆಸಲು ಮ್ಯಾಟಿಸ್, ದೋವಲ್ ಅವರಿಗೆ ಆಹ್ವಾನ ನೀಡಿದ್ದರು. ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳನ್ನು ಎತ್ತಿಹಿಡಿಯುವುದರಲ್ಲಿ ಎರಡು ರಾಷ್ಟ್ರಗಳ ಪಾತ್ರ ಹಾಗು ಭಾರತ-ಅಮೆರಿಕಾ ದೇಶಗಳ ಸಂಬಂಧವನ್ನು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ. 
ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಪಾಡಲು ಭಾರತದ ಕಾರ್ಯಗಳನ್ನು ಮ್ಯಾಟಿಸ್ ಪ್ರಶಂಸಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಹಿ ಹಾಕಿದ ಭದ್ರತಾ ಸಂಬಂಧ ಯೋಜನೆಗಳನ್ನು ಬಲಪಡಿಸಲು ಇಬ್ಬರು ಒಪ್ಪಿಕೊಂಡು ಪುನರುಚ್ಛಿಸಿದ್ದಾರೆ. 
ಈ ಸಭೆಯಲ್ಲಿ ಭಾರತೀಯ ರಾಯಭಾರಿ ನವತೇಜ್ ಶರ್ಮ ಕೂಡ ಭಾಗವಹಿಸಿದ್ದಾರೆ. 
ಅಮೆರಿಕಾದ ನಾಲ್ಕು ದಿವಸಗಳ ಭೇಟಿಗೆ ತೆರಳಿರುವ ದೋವಲ್ ಹೋಂಲ್ಯಾಂಡ್ ಭದ್ರತಾ ಜನರಲ್ (ನಿವೃತ್ತ) ಜಾನ್ ಕೆಲ್ಲಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಚ್ ಆರ್ ಮೆಕ್ ಮಾಸ್ಟರ್ ಅವರುಗಳನ್ನು ಕೂಡ ಭೇಟಿ ಮಾಡಿದ್ದಾರೆ. 
ಮೆಕ್ ಮಾಸ್ಟರ್ ಜೊತೆಗಿನ ಭೇಟಿಯಲ್ಲಿ ಎರಡು ಪಕ್ಷಗಳು ದಕ್ಷಿಣ ಏಷ್ಯಾದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. 
SCROLL FOR NEXT