ಪ್ರಧಾನ ಸುದ್ದಿ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಭೇಟಿ ಮಾಡಿದ ಅಜಿತ್ ಧೋವಲ್, ಮಹತ್ವದ ಮಾತುಕತೆ

Srinivasamurthy VN

ವಾಷಿಂಗ್ಟನ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್ ಮ್ಯಾಟ್ಟಿಸ್ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ವಾಷಿಂಗ್ಟನ್ ನಲ್ಲಿರುವ ಪೆಂಟಗನ್ ಕಚೇರಿಯಲ್ಲಿ ಉಭಯ ನಾಯಕರು ಸೇರಿದ್ದು ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ  ಬಳಿಕ ಇದೇ ಮೊದಲ ಬಾರಿಗೆ ಅಜಿತ್ ಧೋವಲ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ನೂತನ ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಭಾಂಧವ್ಯ ಮತ್ತಷ್ಟು ಆಪ್ತಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಜಿತ್ ಧೋವಲ್ ಅವರಿಗೆ ಅಮೆರಿಕದ ಭಾರತೀಯ ರಾಯಭಾರಿ ನವತೇಜ್ ಸರ್ಣಾ ಅವರು ಸಾಥ್ ನೀಡಿದ್ದಾರೆ. ಇನ್ನು ಈ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕದ ಗೃಹಖಾತೆ ಕಾರ್ಯದರ್ಶಿ ಜನರಲ್ ಜಾನ್ ಕೆಲ್ಲಿ, ಅಮೆರಿಕ  ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆಚ್ ಆರ್ ಮೆಕ್ ಮಾಸ್ಟರ್ ಅವರು ಪಾಲ್ಗೊಂಡಿದ್ದಾರೆ.

ಈ ಸಭೆ ಬಳಿಕ ಅಜಿತ್ ಧೋವಲ್ ಅವರು ಸೆನೆಟರ್ ಜಾನ್ ಮೆಕೇನ್, ಪಿಎಸ್ ಎಎಸ್ಸಿ (powerful Senate Armed Services Committee) ಅಧ್ಯಕ್ಷ  ಮತ್ತು ಸೆನೆಟರ್ ರಿಚರ್ಡ್ ಬರ್ರ್ ಅವರನ್ನು ಭೇಟಿ ಮಾಡಿ  ಚರ್ಚಿಸಲಿದ್ದಾರೆ.

SCROLL FOR NEXT