ಪ್ರಧಾನ ಸುದ್ದಿ

ಯೋಧರ ಶಿರಚ್ಛೇದ: ಪಾಕ್ ನ ಪಾಶವೀ ಕೃತ್ಯವನ್ನು ಕಟುಶಬ್ದಗಳಲ್ಲಿ ಖಂಡಿಸಿದ ಭಾರತೀಯ ಸೇನೆ

Lingaraj Badiger
ನವದೆಹಲಿ: ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನ ಸೇನೆಯ ಕೃತ್ಯವನ್ನು ಭಾರತೀಯ ಸೇನೆ ಮಂಗಳವಾರ ಕಟುಶಬ್ದಗಳಲ್ಲಿ ಖಂಡಿಸಿದ್ದು, ಇದೊಂದು ಪಾಶವೀ ಕೃತ್ಯ ಮತ್ತು ಅಮಾನವೀಯ ನಡುವಳಿಕೆ ಎಂದು ಹೇಳಿದೆ.
ಈ ಸಂಬಂಧ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ(ಡಿಜಿಎಂಒ)ರು ಹಾಟ್ ಲೈನ್ ಮೂಲಕ ಪಾಕಿಸ್ತಾನ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರೊಂದಿಗೆ ಮಾತನಾಡಿದ್ದು, ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ನಡೆದ ಯೋಧರ ಶಿರಚ್ಛೇದದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆಯ ಡಿಜಿಎಂಒ ಪಾಕಿಸ್ತಾನ ಕೃತ್ಯವನ್ನು ಕಟುವಾಗಿ ಖಂಡಿಸಿದ್ದು, ಇದೊಂದು ಪಾಶವೀ ಕೃತ್ಯ ಮತ್ತು ಅಮಾನವೀಯ ನಡುವಳಿಕೆ ಎಂದು ಪ್ರತಿಭಟನೆ ಸಲ್ಲಿಸಿರುವುದಾಗಿ ಭಾರತೀಯ ಸೇನೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೋಮವಾರ ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಪ್ರಚೋದಿತ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ, ಜಮ್ಮುವಿನಲ್ಲಿ ಇಬ್ಬರು ಯೋಧರ ಅಂಗಾಂಗಗಳನ್ನು ಕತ್ತರಿಸಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯೋಧರ ಮೃತದೇಹ ಇಂದು ಅವರ ಊರಿಗೆ ತಲುಪಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

22 ಸಿಖ್‌ ರೆಜಿಮೆಂಟ್‌ನ ಸುಬೇದಾರ್‌ ಪರಮ್‌ಜಿತ್‌ ಸಿಂಗ್‌ ಮತ್ತು ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಪ್ರೇಮ್‌ಸಾಗರ್‌ ಪಾಕ್ ದಾಳಿಗೆ ಬಲಿಯಾದ ಯೋಧರಾಗಿದ್ದಾರೆ.
SCROLL FOR NEXT