ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖ್ಯಾತ ನೇತ್ರ ಶಾಸ್ತ್ರಜ್ಞ ಫರ್ಡಿನ್ಯಾಂಡ್ ಮೊನೊಯರ್ ಗೆ ಗೂಗಲ್ ಡೂಡಲ್ ಗೌರವ!

ಖ್ಯಾತ ನೇತ್ರ ತಜ್ಞ ಫರ್ಡಿನ್ಯಾಂಡ್ ಮೊನೊಯರ್ ಅವರ ಜನ್ಮ ದಿನ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.

ಗೂಗಲ್ ಚಿತ್ರ
Srinivasa Murthy VN
Updated On : 9 May 2017, 10:34 am

ನವದೆಹಲಿ: ಖ್ಯಾತ ನೇತ್ರ ತಜ್ಞ ಫರ್ಡಿನ್ಯಾಂಡ್ ಮೊನೊಯರ್ ಅವರ ಜನ್ಮ ದಿನ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.

ಇಂದು ಅಂದರೆ ಮೇ 9ರಂದು ಫರ್ಡಿನ್ಯಾಂಡ್ ಮೊನೊಯರ್ ಅವರ 181ನೇ ಜನ್ಮ ದಿನವಾಗಿದ್ದು, ಅವರ ನೆನಪಿನಾರ್ಥವಾಗಿ ಗೂಗಲ್ ಡೂಡಲ್ ಬಿಡಿಸಿ ಗೌರವ ಸಲ್ಲಿಕೆ ಮಾಡಿದೆ. 1836 ಮೇ 9ರಂದು ಫ್ರಾನ್ಸ್ ನಲ್ಲಿ ಜನಿಸಿದ  ಫರ್ಡಿನ್ಯಾಂಡ್ ಮೊನೊಯರ್ ಕಣ್ಣ ಪರೀಕ್ಷಾ ವ್ಯವಸ್ಥೆಯನ್ನು ಕಂಡು ಹಿಡಿದ ಮೊದಲ ನೇತ್ರ ತಜ್ಞರಾಗಿದ್ದಾರೆ.

ಸ್ಪಷ್ಟ ದೃಷ್ಟಿ ಅಳತೆ ಮಾಡುವ ಸಲುವಾಗಿ ಡಿಯೋಪ್ಟರ್ ಚಾರ್ಟ್ ಕಂಡುಹಿಡಿದ ಖ್ಯಾತಿ ಕೂಡ ಫರ್ಡಿನ್ಯಾಂಡ್ ಮೊನೊಯರ್ ಅವರಿಗೆ ಲಭಿಸಿದೆ. ಇವರು ಕಂಡು ಹಿಡಿದ ಈ ಡಿಯೋಪ್ಟರ್ ಚಾರ್ಟ್ ಅನ್ನು ಇಂದಿಗೂ ನೇತ್ರ ಪರೀಕ್ಷೆಯಲ್ಲಿ  ಬಳಕೆ ಮಾಡಲಾಗುತ್ತಿದೆ. ಮೊನೊಯರ್ ತಮ್ಮ 76ನೇ ವಯಸ್ಸಿನಲ್ಲಿ 1912 ರಲ್ಲಿ ತಮ್ಮ ಸ್ವಗ್ರಾಮ ಲಿಯಾನ್ ನಲ್ಲಿ ಕೊನೆಯುಸಿರೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments