ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿಶ್ಯಸ್ತ್ರ ಯೋಧನ ಮೇಲಿನ ದಾಳಿ ಉಗ್ರರ ಹೇಡಿತನದ ಪ್ರತೀಕ: ಅರುಣ್ ಜೇಟ್ಲಿ

ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೇನಾಧಿಕಾರಿ ಅಪಹರಿಸಿ ಗುಂಡಿಟ್ಟು ಕೊಲ್ಲುವ ಮೂಲಕ ಉಗ್ರರು ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 11 May 2017, 11:22 am

ನವದೆಹಲಿ: ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೇನಾಧಿಕಾರಿ ಅಪಹರಿಸಿ ಗುಂಡಿಟ್ಟು ಕೊಲ್ಲುವ ಮೂಲಕ ಉಗ್ರರು ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನಾಧಾರಿಯನ್ನು ಉಗ್ರರು ಅಪಹರಿಸಿ ಅವರನ್ನು ಗುಂಡಿಟ್ಟು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅರುಣ್ ಜೇಟ್ಲಿ ಅವರು, ಸೇನಾಧಿಕಾರಿಯ  ಮೇಲಿನ ದಾಳಿ ಉಗ್ರ ಹೇಡಿತನದ ಪ್ರತೀಕ ಎಂದು ಜರಿದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದಿರುವ ಅವರು, ದೇವರು ಯೋಧ ಉಮರ್ ಫಯಾಜ್ ಅವರ ಸಾವಿನ ನೋವನ್ನು ಭರಿಸುವ ಶಕ್ತಿ ಅವರ ಕುಟುಂಕ್ಕೆ ಕರುಣಿಸಲಿ. ಅವರ  ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ. ಲೆಫ್ಟಿನೆಂಟ್ ಉಮರ್ ಫಯಾಜ್ ಕಾಶ್ಮೀರಿ ಯುವಕರಿಗೆ ಮುಂದೆಯೂ ಸ್ಪೂರ್ತಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಅಂತೆಯೇ "ನಿಶಸ್ತ್ರ ಯೋಧನನ್ನು ಅಪಹರಿಸಿ ಅವರನ್ನು ಕೊಂದು ಹಾಕುವ ಮೂಲಕ ಉಗ್ರರು ತಮ್ಮ ಹೇಡಿತನದ ಪ್ರದರ್ಶನ ಮಾಡಿದ್ದಾರೆ. ಲೆಫ್ಟಿನೆಂಟ್ ಉಮರ್ ಫಯಾಜ್ ಅವರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ಕಣಿವೆ  ರಾಜ್ಯದಲ್ಲಿ ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೊಗೆಯಲು ಯುವಕರಿಗೆ ಸ್ಪೂರ್ತಿಯಾಗುತ್ತದೆ" ಎಂದು ಹೇಳಿದ್ದಾರೆ.

2 ರಜಪೂತನ ರೈಫಲ್ಸ್ ತಂಡ ಸೇನಾಧಿಕಾರಿಯಾಗಿದ್ದ ಉಮರ್ ಫಯಾಜ್ ಅವರು, ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ಅಪಹರಿಸಿದ್ದ ಉಗ್ರರು ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದರು.  ಅವರ ಶವ ಶೋಪಿಯಾನ್ ನಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement