ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಾಕ್ ಮೂಲದ ಉಗ್ರ ಸಂಘಟನೆಯಿಂದ ಭಾರತದ ಮೇಲೆ ದಾಳಿ ಸಾಧ್ಯತೆ: ಅಮೆರಿಕ ಗುಪ್ತಚರ ಇಲಾಖೆ

ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಭಾರತದ ಮೇಲೆ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ಮಾಡಲು ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 12 May 2017, 3:31 am

ವಾಷಿಂಗ್ಟನ್: ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಭಾರತದ ಮೇಲೆ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ಮಾಡಲು ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಅಮೆರಿಕ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕ ಡೇನಿಯಲ್ ಕೋಟ್ಸ್, ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ  ಭಾರತದ ಮೇಲೆ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ಮಾಡಲು ಸಂಚು ರೂಪಿಸಿದೆ ಎಂದು ಹೇಳಿದ್ದಾರೆ. ಭಾರತ ಮಾತ್ರವಲ್ಲದೇ ಅದೇ ಸಂದರ್ಭದಲ್ಲಿ ಆಫ್ಘಾನಿಸ್ತಾನದ ಮೇಲೂ ದಾಳಇ ನಡೆಸಲು ಉಗ್ರ ಸಂಘಟನೆ ಸಂಚು  ರೂಪಿಸಿದೆ ಎಂದು ಕೋಟ್ಸ್ ಹೇಳಿದ್ದಾರೆ.

"ಪಾಕಿಸ್ತಾನ ಸರ್ಕಾರ ಉಗ್ರರನ್ನು ಮಟ್ಟಹಾಕುವಲ್ಲಿ ವಿಫವಾಗುತ್ತಿದ್ದು, ಇಸ್ಲಾಮಾಬಾದ್ ಉಗ್ರ ನೆಲೆಗಳನ್ನು ನಾಶಪಡಿಸುವಲ್ಲಿ ವಿಫಲವಾಗಿದೆ. ಅಮೆರಿಕಕ್ಕೂ ಈ ಉಗ್ರ ಸಂಘಟನೆಗಳಿಂದ ಬಾಹ್ಯ ಬೆದರಿಕೆ ಸದಾ ಇದ್ದು, ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪಾಕಿಸ್ತಾನ ಸರ್ಕಾರ ತನ್ನ ಅಸ್ಥಿತ್ವಕ್ಕಾಗಿ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಇದರ ಮೇಲೆಯೂ ಭಯೋತ್ಪಾದಕ ಸಂಘಟನೆಗಳ ಕಣ್ಣಿದೆ. ಹೀಗಾಗಿ ಅಪ್ಘಾನಿಸ್ತಾನದಂತಹ ಪ್ರದೇಶದಲ್ಲಿ ಅಮೆರಿಕಕ್ಕೆ ತನ್ನ ಆಸಕ್ತಿಗಳನ್ನು ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಬೆದರಿಕೆ ಎದುರಿಸಬೇಕಾಗುತ್ತದೆ. ಉಗ್ರ ಸಂಘಟನೆಗಳು ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸುವ ಸಂಚು ಹೂಡುವುದನ್ನು ಮುಂದುವರಿಸುತ್ತಲೇ ಇವೆ’’ ಎಂದು ಅವರು ಹೇಳಿದ್ದಾರೆ.

ಉನ್ನತ ಗುಪ್ತಚರ ಅಧಿಕಾರಿಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿನ ರಾಜಕೀಯ ಹಾಗೂ ಭದ್ರತಾ ಸನ್ನಿವೇಶ 2019ರಲ್ಲಿ ಮತ್ತುಷ್ಟು ಹದಗೆಡಬಹುದು ಹಾಗೂ ಈ ನಿಟ್ಟಿನಲ್ಲಿ ಆ ದೇಶಕ್ಕೆ ಅಮೆರಿಕದಿಂದ ಮಿಲಿಟರಿ ನೆರವು ಸ್ವಲ್ಪ ಮಟ್ಟಿಗೆ ಹೆಚ್ಚೇ ದೊರೆಯಬಹುದು ಎಂದು ಡೇನಿಯಲ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಚೀನಾ ನೆರವು: ಅಮೆರಿಕಕ್ಕೆ ಆತಂಕ
ಇದೇ ವೇಳೆ ಉಗ್ರ ದಾಳಿ ಮತ್ತು ಭಯೋತ್ಪಾದಕ ಸಂಘಟನೆಗಳ ಕೆಲಸಗಳಿಂದಾಗಿ ಇತರ ರಾಷ್ಟ್ರಗಳು ಪಾಕಿಸ್ತಾನವನ್ನು ದೂರವಿರಿಸಿದ್ದು, ಇದರಿಂದ ಆತಂಕಕ್ಕೀಡಾಗಿರುವ ಪಾಕಿಸ್ತಾನ ಚೀನಾದತ್ತ ಮುಖ ಮಾಡಬಹುದು’’ ಎಂದೂ ಡೇನಿಯಲ್ ಸಮಿತಿಯೆದುರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement