ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

"ದಿ ಗೇಮ್ ಚೇಂಜರ್" ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಜೂನ್ ನಲ್ಲಿ ಉಡಾವಣೆ!

ಭಾರತದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹಕ ಎಂದೇ ಖ್ಯಾತಿಗಳಿಸಿರುವ "ದಿ ಗೇಮ್ ಚೇಂಜರ್" ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಜೂನ್ ಮೊದಲ ವಾರದಲ್ಲಿ ಉಡಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನವದೆಹಲಿ: ಭಾರತದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹಕ ಎಂದೇ ಖ್ಯಾತಿಗಳಿಸಿರುವ "ದಿ ಗೇಮ್ ಚೇಂಜರ್" ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಜೂನ್ ಮೊದಲ ವಾರದಲ್ಲಿ ಉಡಾಯಿಸಲಾಗುತ್ತದೆ ಎಂದು  ತಿಳಿದುಬಂದಿದೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಯೋಜನೆಗಳಲ್ಲೇ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್  ಉಡಾವಣೆಯನ್ನು ಮುಂಬರುವ ಜೂನ್ ಮೊದಲ ವಾರದಲ್ಲಿ ನಡೆಸಲಾಗುತ್ತದೆ  ಎಂದು ಇಸ್ರೋ ತಿಳಿಸಿದೆ. ಭಾರತದಲ್ಲಿರುವ ಉಡಾವಣಾ ವಾಹಕಗಳಲ್ಲೇ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದು ಖ್ಯಾತಿಗಳಿಸಿರುವ ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್  ಉಡಾವಣೆಗೆ ಇಸ್ರೋ ಸಂಸ್ಥೆ ಸಕಲ ಸಿದ್ಧತೆ  ಮಾಡಿಕೊಳ್ಳುತ್ತಿದ್ದು. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಬಹು ಉದ್ದೇಶಿತ ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಜೂನ್ ಮೊದಲ ವಾರದಲ್ಲಿ  ಉಡಾಯಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಹಾಗೂ ಖ್ಯಾತ ವಿಜ್ಞಾನಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ರಾಕೆಟ್ ಗೆ ತಾಂತ್ರಿಕ ಸಲಕರಣೆಗಳ ಜೋಡಣೆಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಂಡು ರಾಕೆಟ್ ಉಡಾವಣೆಗೆ ಸಿದ್ಧವಾಗಲಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

"ದಿ ಗೇಮ್ ಚೇಂಜರ್" ಜಿಎಸ್ಎಲ್ ವಿ ಮಾರ್ಕ್ 3 ವಿಶೇಷತೆ
ಜಿಎಸ್ ಎಲ್ ವಿ ಮಾರ್ಕ್ 3 ಪ್ರಸ್ತುತ ಭಾರತದಲ್ಲಿರುವ ರಾಕೆಟ್ ಗಳಲ್ಲೇ ಅತ್ಯಂತ ಶಕ್ತಿಶಾಲಿ ನೌಕೆಯಾಗಿದ್ದು, ಬರೊಬ್ಬರಿ 4 ಟನ್ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯಹೊಂದಿದೆ. ಇದಲ್ಲದೆ ಬಾಹ್ಯಾಕಾಶಕ್ಕೆ  ಮಾನವ ಸಹಿತ ನೌಕೆ ಕಳುಹಿಸಬೇಕು ಎನ್ನುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗೂ ಇದು ನೆರವಾಗಲಿದೆ. ಇದೇ ಕಾರಣಕ್ಕೆ ಈ ಹಿಂದೆ ನಡೆದ ಪರೀಕ್ಷಾರ್ಥ ಉಡಾವಣೆ ಹಾಗೂ ಪ್ರಸ್ತುತ ನಡೆಯುತ್ತಿರುವ ಉಡಾವಣೆ ಸಾಕಷ್ಟು  ಮಹತ್ವ ಪಡೆದುಕೊಂಡಿದೆ.

ಜಿಎಸ್ ಎಲ್‌ವಿ ಮಾರ್ಕ್ 3 3650 ಕೆಜಿ ತೂಕದ  ಅತ್ಯಾಧುನಿಕ ರಾಕೆಟ್ ಆಗಿದ್ದು,  4 ಸಾವಿರ ಕೆಜಿ ತೂಕದ ಸ್ಪೇಸ್ ಕ್ಯಾಪ್ಸೂಲ್ ಗಳನ್ನು (ಉಪಗ್ರಹಗಳು)ನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ. ರಾಕೆಟ್ ಗೆ ಕ್ರಯೋಜನಿಕ್ ಇಂಜಿನ್  ಅಳವಡಿಸಿದ್ದು, ಈ ವ್ಯವಸ್ಥೆ ಹೊಂದಿದ ದೇಶದ ಮೊದಲ ರಾಕೆಟ್ ಎಂಬ ಕೀರ್ತಿಗೂ ಜಿಎಸ್ ಎಲ್ ವಿ ಮಾರ್ಕ್ 3 ಪಾತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT